Saturday, July 5, 2025

Latest Posts

ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

- Advertisement -

Hubballi: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಈ ದುರ್ಘಟನೆ ನಡೆದಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ.

ಅಪಘಾತವಾದಾಗ, ಬೈಕ್ ಬಸ್ ಕೆಳಗಡೆ ಸಿಲುಕಿದೆ. ಹಾಗಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನಿಸಲಾಗಿದೆ.

ಬೈಕ್ ಸವಾರರು ಹುಬ್ಬಳ್ಳಿ ಕಡೆಯಿಂದ ಕುಸುಗಲ್ ಕಡೆ ಹೊರಟಿದ್ದರು. ಬೈಕ್ ವೇಗವಾಗಿದ್ದ ಕಾರಣ ನಿಯಂತ್ರಣ ತಪ್ಪಿ, ಬಸ್‌ಗೆ ಡಿಕ್ಕಿ ಹೊಡೆದಿದೆ. ಇನ್ನು ಮೃತರು ಮತ್ತು ಗಾಯಾಳುಗಳ ವಿವರ ಇನ್ನೂ ಪತ್ತೆಯಾಗಲಿಲ್ಲ. ಸ್ಥಳಕ್‌ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪ್ರಧಾನಿ ಮೋದಿಯವರನ್ನು ಭೇಟಿಯಾಗ ಹೊರಟ ಸಿಎಂಗೆ ಆರ್.ಅಶೋಕ್ ಕಿವಿಮಾತು

ಕುಮಾರಸ್ವಾಮಿನೇ ಇರ್ತಾರೋ ಇಲ್ವೋ ಗೊತ್ತಿಲ್ಲಾ: ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವರು

2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ

- Advertisement -

Latest Posts

Don't Miss