‘I.N.D.I.A ಮೈತ್ರಿ ಕೂಟ ತನ್ನ ಮರ್ಯಾದೆಯನ್ನು ತಾನೇ ಮಣ್ಣುಪಾಲು ಮಾಡಿಕೊಳ್ಳುತ್ತಿದೆ’

Political News: ನವದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ 141 ಸಂಸದರನ್ನು ಕಲಾಪದಿಂದ ಅಮಾನತು ಮಾಡಲಾಗಿದೆ.

ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕಾಂಗ್ರೆಸ್‌ನ ಕೆಲ ಸಂಸದರು ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ತೋರಿಸಿದ್ದರು. ಹೀಗಾಗಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು. ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ, ವಿರೋಧ ಪಕ್ಷದ 141 ಮಂದಿ ಸಂಸದರನ್ನು ಅಮಾನತು ಮಾಡಲಾಗಿದೆ.

ಈ ವೇಳೆ ಸಂಸತ್ ಹೊರಗಡೆ ಕುಳಿತ ತೃಣಮೂಲ ಕಾಂಗ್ರೆಸ್ ಸಂಸದರಲ್ಲಿ ಒಬ್ಬರಾಗಿರುವ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿಗಳಾದ, ಜಗದೀಪ್ ಧನಕರ್ ಅವರನ್ನನಪ ಅಪಹಾಸ್ಯ ಮಾಡಿದ್ದಾರೆ. ಅವರು ಯಾವ ರೀತಿಯಾಗಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಗಿ ಕಾಪಿ ಮಾಡಿದ್ದಾರೆ. ಅಲ್ಲದೇ, ಈ ಟಿಂಗಲ್‌ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಗು ನಗುತ್ತ ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿಯ ಹಲವು ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್, ನಾಚಿಕೆಗೆಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಆವರಣದಲ್ಲಿಯೇ, ದೇಶದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರನ್ನು ಅಪಹಾಸ್ಯ ಮಾಡಿದ್ದೂ ಅಲ್ಲದೇ, ಅದನ್ನು ರಾಹುಲ್ ಗಾಂಧಿ ಚಿತ್ರೀಕರಣ ಕೂಡ ಮಾಡುತ್ತಾರೆ. I.N.D.I.A ಮೈತ್ರಿ ಕೂಟ ತನ್ನ ಮರ್ಯಾದೆಯನ್ನು ತಾನೇ ಮಣ್ಣುಪಾಲು ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಲೋಕಸಭಾ ಅಭ್ಯರ್ಥಿ ಆಗಬೇಕು, ನನ್ನಿಂದ ಮುಕ್ತ ಆಹ್ವಾನ: ಶಾಸಕ ಮಹೇಶ್ ಟೆಂಗಿನಕಾಯಿ

19 ಮೊರಾರ್ಜಿ ದೇಸಾಯಿ ವಸತಿ ಶಾಲೆ, 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣಕ್ಕೆ 675 ಕೋಟಿ ರೂ. ಅನುದಾನಕ್ಕೆ ಮನವಿ

‘ರಾಜ್ಯದಲ್ಲಿ ಸರಕಾರ ಬಂದು ಆರು ತಿಂಗಳು ಆದರು ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ’

About The Author