Political News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೆಲ ದಿನಗಳ ಹಿಂದಷ್ಟೇ ನನ್ನ ತಂಟೆಗೆ ಬಂದ್ರೆ ಸುಮ್ನೆ ಇರೋದಿಲ್ಲ ಅಂತ ತಮ್ಮ ವಿರೋಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದೀಗ ಬಿಜೆಪಿ (BJP) ವಿರುದ್ಧ ಶೆಟ್ಟರ್ ಆರೋಪಿಸಿದ್ದಾರೆ. ಬಿಜೆಪಿವರಿಗೆ ಪದೇ ಪದೇ ನಾನೇ ಟಾರ್ಗೆಟ್ ಆಗ್ತಿದ್ದೇನೆ ಅಂತ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ, ಮಾಜಿ ಸಚಿವರಿಗೆ ಜಗದೀಶ್ ಶೆಟ್ಟರ್ ಶಕ್ತಿ ಏನು ಎನ್ನುವುದು ಅರ್ಥವಾಗಿದೆ ಅಂತ ಹೇಳಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಕುರಿತಂತೆಯೂ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯವರಿಗೆ ನಾನೇ ಟಾರ್ಗೆಟ್ ಆಗ್ತಿದ್ದೇನೆ
ಬಿಜೆಪಿವರಿಗೆ ಪದೇ ಪದೇ ನಾನೇ ಟಾರ್ಗೆಟ್ ಆಗ್ತಿದ್ದೇನೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಫಲಿತಾಂಶ ಪರಿಣಾಮದಿಂದ ಮತ್ತೆ ಶೆಟ್ಟರ್ ಟಾರ್ಗೆಟ್ ಆಗಿದ್ದಾರೆ. ಏನು ಪರಿಣಾಮ ಆಗಿದೆ ಅಂತ ಅವರು ಹೇಳಬೇಕು ಅಂತ ಹೇಳಿದ್ರು.
ಬಿಜೆಪಿ ನಾಯಕರಿಗೆ ಶೆಟ್ಟರ್ ಶಕ್ತಿ ಅರ್ಥವಾಗಿದೆ
ನಾನು ನನ್ನ ಬಗ್ಗೆ ಮಾತನಾಡಲ್ಲ, ಒಬ್ಬ ವ್ಯಕ್ತಿ ಶಕ್ತಿ ಏನು ಅಂತ ಗೊತ್ತಾದಾಗ ಅದು ಅರ್ಥವಾಗುತ್ತದೆ. ಬಿಜೆಪಿ ನಾಯಕರಿಗೆ, ಮಾಜಿ ಸಚಿವರಿಗೆ, ಶಾಸಕರಿಗೆ ಶೆಟ್ಟರ್ ಬಗ್ಗೆ ಅರ್ಥವಾಗಿದೆ ಅಂತ ಹೇಳಿದ್ರು.
ನಾನು ಬಿಜೆಪಿಗೆ ವಾಪಸ್ ಹೋಗುವುದು ಸುಳ್ಳು
ಕಾಂಗ್ರೆಸ್‌ಗೆ ಬರುವವರಲ್ಲಿ ಗೊಂದಲ ಸೃಷ್ಟಿಸೋಕೆ ನಾನು ಬಿಜೆಪಿಗೆ ಹೋಗ್ತಿದೇನೆ ಅಂತ ಹೇಳ್ತಿದಾರೆ ಅಂತ ಶೆಟ್ಟರ್ ಹೇಳಿದ್ದಾರೆ. ಯಾವ ಬಿಜೆಪಿ ಹೈಕಮಾಂಡ್ ಇದೂವರೆಗೆ ನನ್ನ ಜೊತೆಗೆ ಮಾತನಾಡಿಲ್ಲ. ಈಶ್ವರಪ್ಪ ಹೈಕಮಾಂಡ್ ಅಲ್ಲಾ, ಅರ್ಥ ಇಲ್ಲದ ಪ್ರಶ್ನೆಗೆ ಉತ್ತರ ನೀಡಲ್ಲ ಅಂತ ಶೆಟ್ಟರ್ ಗರಂ ಆದ್ರು.
ಲೋಕಸಭೆಗೆ ನಿಲ್ಲುತ್ತೇನೆ ಅಂತ ನಾನು ಎಲ್ಲಿಯೂ ಹೇಳಿಲ್ಲ
ಲೋಕಸಭೆಗೆ ನಾನು ನಿಲ್ಲುತ್ತೇನೆ ಅಂತ ಎಲ್ಲಿಯೂ ಹೇಳಿಲ್ಲ, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ ಅಂತ ಜಗದೀಶ್ ಶೆಟ್ಟರ್ ಹೇಳಿದ್ರು. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಇದನ್ನು ಸ್ಪಷ್ಟಪಡಿಸಿದ್ದೇನೆ. ಪ್ರಹ್ಲಾದ್ ಜೋಶಿಯವರು ಸಿಟ್ಟಿಂಗ್ ಎಂಪಿ, ಅವರು ನಿಲ್ಲಲೇಬೇಕು. ನಿಲ್ಲೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಅಂತ ಶೆಟ್ಟರ್ ಹೇಳಿದ್ರು.
ಈ ಬಗ್ಗೆ ಚರ್ಚೆ ಮಾಡೋದೇ ಅನಾವಶ್ಯಕ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡ್ತೇನೆ ಅಂತ ಹೇಳಿದ್ದೆ. ಅದರ ಪ್ರಕಾರ ನಾನು ಚುನಾವಣೆಗೆ ನಿಂತಿದ್ದೆ. ಆದರೆ ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಮತ್ತು ದೆಹಲಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ, ನನ್ನ ಜೊತೆಗೆ ಮತ್ತು ಬೆಂಗಳೂರಿನಲ್ಲಿ ವಯಕ್ತಿಕವಾಗಿ ಗಂಭೀರವಾಗಿ ಚರ್ಚೆ ಮಾಡಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆಯೇ ಅನಾವಶ್ಯಕ ಎಂದಿದ್ದಾರೆ.
ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯನ್ನು ಗಟ್ಟಿಗೊಳ್ಳಿಸುವ ಪ್ರಯತ್ನ ಮಾಡುವೆ. ರಾಜ್ಯದಲ್ಲಿ ಈ ಬಾರಿ 15 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲುತ್ತದೆ. ಇದರಲ್ಲಿ ಧಾರವಾಡ ಕೂಡ ಒಂದು. ಕಾಂಗ್ರೆಸ್ ಯಾರನ್ನು ಅಭ್ಯರ್ಥಿಯನ್ನಾಗಿಸುತ್ತೋ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಅಂತ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಜಗದೀಶ್ ಶೆಟ್ಟರ್ ಲೋಕಸಭಾ ಅಭ್ಯರ್ಥಿ ಆಗಬೇಕು, ನನ್ನಿಂದ ಮುಕ್ತ ಆಹ್ವಾನ: ಶಾಸಕ ಮಹೇಶ್ ಟೆಂಗಿನಕಾಯಿ
19 ಮೊರಾರ್ಜಿ ದೇಸಾಯಿ ವಸತಿ ಶಾಲೆ, 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣಕ್ಕೆ 675 ಕೋಟಿ ರೂ. ಅನುದಾನಕ್ಕೆ ಮನವಿ
‘ರಾಜ್ಯದಲ್ಲಿ ಸರಕಾರ ಬಂದು ಆರು ತಿಂಗಳು ಆದರು ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ’