Thursday, November 7, 2024

Latest Posts

ಧನಕರ್‌ಗೆ ಕರೆ ಮಾಡಿ ನಾನೂ 20 ವರ್ಷಗಳಿಂದ ಅವಮಾನ ಅನುಭವಿಸಿದ್ದೇನೆ, ಬೇಸರಿಸಬೇಡಿ ಎಂದ ಮೋದಿ

- Advertisement -

Political News: ಲೋಕಸಭಾ ಕಲಾಪದಲ್ಲಿ ಅಮಾನತು ಮಾಡಿದ ಕಾಂಗ್ರೆಸ್ , ತೃಣಮೂಲ ಕಾಂಗ್ರೆಸ್ ಸಂಸದರು, ಸಂಸತ್ತಿನ ಆವರಣದಲ್ಲೇ ಇರುವಾಗ, ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹೇಗೆ ಮಾತನಾಡುತ್ತಾರೆ ಎಂದು ಮಿಮಿಕ್ರಿ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಸಂಸದರೆಲ್ಲ ಅವರ ತಮಾಷೆ ನೋಡಿ ನಗುತ್ತಿದ್ದರು. ಇದನ್ನೆಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದರು.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮತ್ತು ಕೆಲ ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ಗೆ ಕರೆ ಮಾಡಿ, ಕಳೆದ 20 ವರ್ಷಗಳಿಂದ ಇಂಥ ಅವಮಾನಗಳನ್ನು ನಾನೂ ಎದುರಿಸಿದ್ದೇನೆ. ಇದಕ್ಕೆ ನೀವು ಬೇಸರಪಡಬೇಡಿ. ಇಂಥ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ಬಗ್ಗೆ ಜಗದೀಪ್ ಧನಕರ್ ಟ್ವೀಟ್ ಮಾಡಿದ್ದು, ನಾನು ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರಿಂದ ಕರೆ ಸ್ವೀಕರಿಸಿದೆ. ಅವರು ಕೂಡ ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದರು. ಅಲ್ಲದೇ, ಬೇಸರಿಸಿಕೊಳ್ಳಬೇಡಿ, ಈ ಘಟನೆ ದುರದೃಷ್ಟಕರ ಎಂದು ಹೇಳಿದರು. ಆದರೆ ನನ್ನ ಕರ್ತವ್ಯ ಪಾಲನೆ ಮಾಡುವುದನ್ನು, ಕೆಲಸದಲ್ಲಿ ನನ್ನ ಬದ್ಧತೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವಮಾನ ಮಾಡಿ ನನ್ನ ಹಾದಿಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಮೋದಿಯವರಿಗೆ ಹೇಳಿದ್ದೇನೆಎಂದು ಧನಕರ್ ಹೇಳಿದ್ದಾರೆ.

‘ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ನೆರವು ನೀಡುತ್ತಾರೆಂದು ಭಾವಿಸಿದ್ದೇನೆ’

ಬಿಜೆಪಿಗೆ ನಾನೇ ಟಾರ್ಗೆಟ್ ಆಗ್ತಿದ್ದೇನೆ! ನನ್ನ ಬಗ್ಗೆ ಅವರಿಗೆ ಈಗ ಅರ್ಥವಾಗಿದೆ ಎಂದ ಶೆಟ್ಟರ್

‘ಬಿಜೆಪಿಯ ಪಕ್ಷದ MPಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ಅಧಿವೇಶನ ನಡೆಸುವುದು ನಾಚಿಕೆಗೇಡು’

- Advertisement -

Latest Posts

Don't Miss