Hubballi News: ಹುಬ್ಬಳ್ಳಿ: ಲಸಿಕೆ ಎಫೆಕ್ಟ್ನಿಂದ ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ, ಧೃವ(2) ಸಾವನ್ನಪ್ಪಿದ ಮಗುವಾಗಿದ್ದು, ಈ ಮಗು ತನ್ನ ಅಜ್ಜ ಅಜ್ಜಿಯ ಮನೆಯಲ್ಲಿ ವಾಸವಿತ್ತು.
ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬುವವರ ಮೊಮ್ಮಗ ಧೃವನಿಗೆ ನಿನ್ನೆ ಒಂದೇ ದಿನ 5 ಲಸಿಕೆ ಹಾಕಲಾಗಿದೆ. ಅಂಗನವಾಡಿ ಕೇಂದ್ರದ ಸಿಬ್ಬಂದಿಯ ಈ ಎಡವಟ್ಟಿನಿಂದಾಗಿ, ಮಗುವಿಗೆ ಓವರ್ ಡೋಸ್ ಎಫೆಕ್ಟ್ ಆಗಿದ್ದು, ಮಗು ಸಾವನ್ನಪ್ಪಿದೆ.
ನಿನ್ನೆ ಮಧ್ಯಾಹ್ನ ಮಗುವಿಗೆ ಲಸಿಕೆ ಹಾಕಲಾಗಿದ್ದು, ಲಸಿಕೆ ಹಾಕಿಸಿಕೊಂಡ ಬಳಿಕ, ಮಗುವಿಗೆ ತೀವ್ರ ಜ್ವರ ಮತ್ತು ಹೊಟ್ಟೆ ನೋವು ಬಂದು, ಮಗು ಒದ್ದಾಡಿದೆ. ಕೂಡಲೇ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುವ ಮುನ್ನವೇ ಮಗು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿದ್ದು, ಅಂಗನವಾಡಿ ಕಾರ್ಯಕರ್ತೆಯ ತಪ್ಪಿನಿಂದಲೇ, ನಮ್ಮ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ.
ಬಿಲ್ ಪಾಸ್ ಮಾಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
ಧನಕರ್ಗೆ ಕರೆ ಮಾಡಿ ನಾನೂ 20 ವರ್ಷಗಳಿಂದ ಅವಮಾನ ಅನುಭವಿಸಿದ್ದೇನೆ, ಬೇಸರಿಸಬೇಡಿ ಎಂದ ಮೋದಿ
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ




