Political News: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಮೋದಿಯೊಂದಿಗೆ ಗೌಡರ ಕುಟುಂಬ ಫೋಟೋ ಶೂಟ್ ಕೂಡ ಮಾಡಿಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಹಾಗೂ ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರ ನಡುವಿನ ಬಾಂಧವ್ಯ, ಅವರಿಬ್ಬರೂ ಪರಸ್ಪರ ಇರಿಸಿಕೊಂಡಿರುವ ಪ್ರೀತಿ, ವಿಶ್ವಾಸವನ್ನು ಕಂಡು ನನ್ನ ಮನಸ್ಸು ಉಕ್ಕಿ ಬಂದಿದೆ. ಸಂಸತ್ ಭವನದಲ್ಲಿರುವ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆದ ಈ ಭೇಟಿಯು ಅತ್ಯಂತ ಆವಿಸ್ಮರಣೀಯ. ಮಾನ್ಯ ಪ್ರಧಾನಮಂತ್ರಿಗಳು ನಮ್ಮ ಬಗ್ಗೆ ತೋರಿದ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ನಾನು ಆಭಾರಿ. ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ, ಮಾಜಿ ಸಂಸದರಾದ ಶ್ರೀ ಕುಪೇಂದ್ರ ರೆಡ್ಡಿ, ಸಂಸದರಾದ ಶ್ರೀ ಪ್ರಜ್ವಲ್ ರೇವಣ್ಣ, ಶಾಸಕರಾದ ಶ್ರೀ ಸಿ.ಎನ್.ಬಾಲಕೃಷ್ಣ ಜತೆಯಲ್ಲಿದ್ದರು.
ನವದೆಹಲಿಯ ಸಂಸತ್ ಭವನದ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರೊಂದಿಗೆ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಗಳ ಜತೆಗೆ, ಕರ್ನಾಟಕದ ರೈತಾಪಿ ಜನರ ಸಮಸ್ಯೆಗಳನ್ನು ಮಾನ್ಯ ಪ್ರಧಾನಿಗಳ ಗಮನಕ್ಕೆ ತರಲಾಯಿತು. ಅಲ್ಲದೆ, ಕೊಬರಿ ಖರೀದಿಯ ಬಗ್ಗೆ ಅವರಿಗೆ ಅಹವಾಲು ಸಲ್ಲಿಸಲಾಯಿತು. ನಮ್ಮ ಮನವಿಗೆ ಮಾನ್ಯ ಪ್ರಧಾನಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi
ಅವರು ಹಾಗೂ ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ@H_D_Devegowda ಅವರ ನಡುವಿನ ಬಾಂಧವ್ಯ, ಅವರಿಬ್ಬರೂ ಪರಸ್ಪರ ಇರಿಸಿಕೊಂಡಿರುವ ಪ್ರೀತಿ, ವಿಶ್ವಾಸವನ್ನು ಕಂಡು ನನ್ನ ಮನಸ್ಸು ಉಕ್ಕಿ ಬಂದಿದೆ. ಸಂಸತ್ ಭವನದಲ್ಲಿರುವ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆದ ಈ ಭೇಟಿಯು ಅತ್ಯಂತ ಆವಿಸ್ಮರಣೀಯ.… pic.twitter.com/siTGEt4r6J— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 21, 2023
ನವದೆಹಲಿಯ ಸಂಸತ್ ಭವನದ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಮಾನ್ಯ ಪ್ರಧಾನಿಗಳಾದ ಶ್ರೀ @narendramodi ಅವರನ್ನು ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರೊಂದಿಗೆ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಗಳ ಜತೆಗೆ, ಕರ್ನಾಟಕದ ರೈತಾಪಿ ಜನರ ಸಮಸ್ಯೆಗಳನ್ನು ಮಾನ್ಯ ಪ್ರಧಾನಿಗಳ ಗಮನಕ್ಕೆ ತರಲಾಯಿತು.… pic.twitter.com/ytALX1OIBr
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 21, 2023
ಬಿಲ್ ಪಾಸ್ ಮಾಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
ಧನಕರ್‌ಗೆ ಕರೆ ಮಾಡಿ ನಾನೂ 20 ವರ್ಷಗಳಿಂದ ಅವಮಾನ ಅನುಭವಿಸಿದ್ದೇನೆ, ಬೇಸರಿಸಬೇಡಿ ಎಂದ ಮೋದಿ
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ