Hubballi News: ಹುಬ್ಬಳ್ಳಿಯ ವಿದ್ಯಾನಗರದ ವಿಜಯ ಕುಮಾರ ಬಗಾಡೆ ಎಂಬುವವರು, 2013 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಎಸ್. ಎಸ್. ವಿ. ಶೆಲ್ಟರ್ಸ್ ನಿರ್ಮಿಸುತ್ತಿದ್ದ ಹುಬ್ಬಳ್ಳಿ ಸೆಂಟರ್‌ನಲ್ಲಿ ನಂ. 31 ಎ, 165 ಚ. ಅಡಿ ವಿಸ್ತೀರ್ಣದ ಮಳಿಗೆ ಖರೀದಿಸಲು ನಿರ್ಧರಿಸಿದ್ದರು. ಬಳಿಕ ರೂ. 8 ಲಕ್ಷ 50 ಸಾವಿರಗಳಿಗೆ ಫೆಬ್ರವರಿ 21, 2013 ರಂದು ಒಪ್ಪಂದ ಪತ್ರ ಕೂಡ ಮಾಡಿಕೊಂಡಿದ್ದರು. ಈ ಒಪ್ಪಂದದಂತೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು.
ಒಪ್ಪಂದದ ಪ್ರಕಾರ ನಿಗದಿತ ಅವಧಿಯಲ್ಲಿ ಮಳಿಗೆಯನ್ನು ವಿಜಯ ಕುಮಾರ್ ಅವರ ಸುಪರ್ದಿಗೆ ಕೊಡಲು ಕಂಪನಿ ನಿರಾಕರಿಸಿದೆ. ಖರೀದಿ ಪತ್ರವನ್ನೂ ಕೂಡ ಮಾಡಿಕೊಟ್ಟಿರುವುದಿಲ್ಲ. ಇದರಿಂದ ಬೇಸತ್ತ ವಿಜಯ ಕುಮಾರ್, ಇದು ಗ್ರಾಹಕರ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, 2013 ರಲ್ಲಿ ರೂ.8 ಲಕ್ಷ 50 ಸಾವಿರ ಹಣ ಪಡೆದುಕೊಂಡು ಒಪ್ಪಂದದ ಪ್ರಕಾರ ಖರೀದಿ ಪತ್ರ ಮಾಡಿಕೊಡಬೇಕಿತ್ತು. ಆದರೆ ಹಾಗೆ ಮಾಡದೇ ವಿಜಯ ಕುಮಾರ್ ಅವರಿಗೆ ಮೋಸ ಮಾಡಿ ಎಸ್.ಎಸ್.ವಿ. ಶೆಲ್ಟರ್ಸ್‌ನವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.
ವಿಜಯ ಕುಮಾರ ಸಂದಾಯ ಮಾಡಿದ 8 ಲಕ್ಷ 50 ಸಾವಿರ ರೂ. ಮತ್ತು ಅದರ ಮೇಲೆ ಹಣ ನೀಡಿದ ದಿನದಿಂದ ಇಲ್ಲಿಯವರೆಗೆ ಶೇ.8 ರಂತೆ ಬಡ್ಡಿಯಂತೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎಸ್.ಎಸ್.ವಿ. ಶೆಲ್ಟರ್ಸ್‌ನವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಡಿಸಿಎಂ ಡಿಕೆಶಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಇಟ್ಟ ಬೇಡಿಕೆಗಳಿವು..