Big boss News: ಕನ್ನಡ ಬಿಗ್‌ಬಾಸ್ ಸೀಸನ್ 10ಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಪ್ರೇಕ್ಷಕರು ಪ್ರತಿದಿನದ ಎಪಿಸೋಡ್ ಮಿಸ್ ಮಾಡಿದ್ರೂ, ವಾರದ ಕೊನೆಯಲ್ಲಿ ಬರುವ ಕಿಚ್ಚನ ಪಂಚಾಯ್ತಿಯನ್ನ ಮಾತ್ರ ಮಿಸ್ ಮಾಡಿಕೊಳ್ಳಲು ಇಷ್ಟಪಡೋದಿಲ್ಲ. ಏಕೆಂದರೆ, ವಾರಪೂರ್ತಿಯ ತೀರ್ಪು ಈ ದಿನ ಸಿಗುತ್ತದೆ. ಆದರೆ ಈ ವಾರದ ಪಂಚಾಯ್ತಿ ನಡೆಸಿಕೊಡಲು, ಕಿಚ್ಚ ಬರೋದು ಡೌಟ್ ಎನ್ನಲಾಗಿದೆ.
ಇಂದಿನಿಂದ ಕಿಚ್ಚ ಕ್ರಿಕೇಟ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಇಂದು ಕೆಸಿಸಿ ಉದ್ಘಾಟನಾ ಸಮಾರಂಭವಿದ್ದು, ಕ್ರಿಕೇಟ್ ಶುರುವಾಗಲಿದೆ. ಇಂದು ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಅವರೊಂದಿಗೆ ಸುದೀಪ್ ಇರಲೇಬೇಕಾಗಿದೆ. ಅಲ್ಲದೇ, ಇಂದು ಮತ್ತು ನಾಳೆ ಕಿಚ್ಚನ ಪಂಚಾಯ್ತಿ ಇರುವುದು ಡೌಟ್ ಅಂತಾನೇ ಹೇಳಲಾಗುತ್ತಿದೆ.
ಕಿಚ್ಚನ ಪಂಚಾಯ್ತಿ ವೇಳೆ ಕಾರ್ಯಕ್ರಮ ನಡೆಸಿಕೊಡಲು ಬೇರೆ ಯಾರಾದ್ರೂ ಬರ್ತಾರಾ..? ಅಥವಾ ಯಾವುದಾದರೂ ಸೆಲೆಬ್ರಿಟಿ ಬಿಗ್‌ಬಾಸ್ ಮನೆಗೆ ಬರ್ತಾರಾ..? ಇಂದು ಎಲಿಮಿನೇಷನ್ ಇರತ್ತಾ, ಇಲ್ಲವಾ..? ಈ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಂದ್ರೆ, ಬಿಗ್‌ಬಾಸ್ ಮುಂದಿನ ಎಪಿಸೋಡ್‌ವರೆಗೂ ಕಾದು ನೋಡಬೇಕಿದೆ.
ಸಚಿವರ ಪ್ರೈವೇಟ್ ಜೆಟ್‌ನಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ಅಸಮಾಧಾನ: ಸಿದ್ದು ತಿರುಗೇಟು

