Friday, November 8, 2024

Latest Posts

‘ಧರ್ಮ ದಂಗಲ್ ಎಂದರೆ ಏನು? ಅದರಲ್ಲಿ ಧರ್ಮ ದಂಗಲ್ ಏನಾಗಿದೆ ಹೇಳಿ?’

- Advertisement -

Political News: ಧಾರವಾಡ: ಹಿಜಬ್ ನಿಷೇಧ ಆದೇಶ ವಾಪಸ್ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ, ಧಾರವಾಡದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಅದು ದಂಗಲ್ ಹೇಗೆ ಆಗುತ್ತದೆ ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಮಾಧ್ಯಮದವರು ಹಿಜಬ್ ನಿಷೇಧ ವಾಪಸ್ ತೆಗೆದುಕೊಂಡಿದ್ದು, ಧರ್ಮ ದಂಗಲ್‌ಗೆ ಕಾರಣವಾಗಬಹುದಾ ಎಂಬ ರೀತಿ ಪ್ರಶ್ನೆ ಕೇಳಿದ್ದು, ಇದಕ್ಕೆ ಲಾಡ್ ಗರಂ ಆಗಿದ್ದಾರೆ. ಅದು ದಂಗಲ್ ಹೇಗೆ ಆಗುತ್ತದೆ..? ಸಿಎಂ ಹೇಳಿದ್ದು ಕಾನೂನಾತ್ಮವಾಗಿ ಇದೆ. ಅದನ್ನು ದಂಗಲ್ ಎಂಬ ಪದ ಬಳಸಿ ಯಾಕೆ ಹೇಳ್ತಿರಾ? ಧರ್ಮ ದಂಗಲ್ ಎಂದರೆ ಏನು? ಅದರಲ್ಲಿ ಧರ್ಮ ದಂಗಲ್ ಏನಾಗಿದೆ ಹೇಳಿ? ಮಾಧ್ಯಮಗಳು ಧರ್ಮ ದಂಗಲ್ ಪದ ಬಳಸುತ್ತಿದ್ದಿರಿ. ಇದು ಎಷ್ಟು ಸರಿ? ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಅದಕ್ಕೆ ಅವಕಾಶವಿದೆ. ಅದರಲ್ಲಿ ಸಿಎಂ ತಪ್ಪು ಏನಿದೆ.  ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ. ನಾನು ಒಬ್ಬ ಹಿಂದೂ ಅಲ್ಲವಾ..? ನಾನೇನು ವಿರೋಧ ಮಾಡುತ್ತಿಲ್ಲ. ನೀವು ಹಿಂದೂ ಅಲ್ಲವಾ? ನೀವು ವಿರೋಧ ಮಾಡುತ್ತಿರಾ? ನಿಮ್ಮ ನಿಲುವು ಏನು? ಎಂದು ಮಾಧ್ಯಮದವರಿಗೆ ಲಾಡ್ ಮರು ಪ್ರಶ್ನಿಸಿದ್ದಾರೆ.

ಮುಸ್ಲಿಂ ತುಷ್ಠೀಕರಣ ಆರೋಪ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಲಾಡ್,  ವಿರೋಧ ಪಕ್ಷಗಳ ದೃಷ್ಟಿಕೋನ ಹಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂದರೆ ಏನು? ಹಿಂದೂ, ಮುಸ್ಲಿಂ, ಸಿಖ್, ಬುದ್ಧ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತ್ತೇವೆ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನಬದ್ಧವಾಗಿ ಯಾವ ರೀತಿ ಇರಬೇಕು ಅಂತಿದೆ ಆ ರೀತಿ ಮಾಡುತ್ತಾರೆ. ಆ ರೀತಿ ಮಾಡುವಲ್ಲಿ ಸಿಎಂ ಪರಿಶೀಲಿಸುತ್ತಿದ್ದಾರೆ ಎಂದು ಸಂತೋಷ್ ಲಾಡ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ನಾಯಕರ ದೆಹಲಿ ಭೇಟಿ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ನಾನು ಬೇರೆ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಲೋಕಸಭೆ ಟಿಕೆಟ್ ಬಗ್ಗೆ ಅಲ್ಲಿ ಚರ್ಚೆಯಾಗಿಲ್ಲ ಎಂದಿದ್ದಾರೆ. ಇನ್ನು ನಿಗಮ ಮಂಡಳಿ ನೇಮಕ ವಿಚಾರದ ಬಗ್ಗೆ ಮಾತನಾಡಿದ್ದು, ಶಾಸಕರು ಮತ್ತು ಕಾರ್ಯಕರ್ತರಿಗೆ ಕೊಡುವ ನಿರ್ಧಾರ ಆಗಿದೆ ಎಂದಿದ್ದಾರೆ.

ಧಾರವಾಡ ಲೋಕಸಭೆ ಟಿಕೆಟ್ ಆಕಾಂಕ್ಷಿಗಳ ಸಭೆ ವಿಚಾರದ ಬಗ್ಗೆ ಲಾಡ್ ಪ್ರತಿಕ್ರಿಯಿಸಿದ್ದು,  ಸಭೆ ಆಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿಗೆ ಇದೆ. ಅದರ ಬಗ್ಗೆ ಪರಿಶೀಲನೆ ಮಾಡಬೇಕು. ಪರಿಶೀಲನೆ ಬಳಿಕ ಹೈಕಮಾಂಡ್ ಮತ್ತು ಡಿಕೆಶಿ ಫೈನಲ್ ಮಾಡುತ್ತಾರೆ. ಲೋಕಸಭೆ ಯಲ್ಲಿ ನಾವು ಮಾಡಿದ ಕೆಲಸ ಆಧಾರದ ಮೇಲೆ ಜನರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

ಸಚಿವರ ಪ್ರೈವೇಟ್ ಜೆಟ್‌ನಲ್ಲಿ ಸಿಎಂ ಪ್ರಯಾಣಿಸಿದ್ದಕ್ಕೆ ಬಿಜೆಪಿ ಅಸಮಾಧಾನ: ಸಿದ್ದು ತಿರುಗೇಟು

ಉಡುಪಿ ಕೃಷ್ಣಮಠಕ್ಕೆ ಭೇಟಿ ಕೊಟ್ಟ ನಟಿ ಸಾಯಿ ಪಲ್ಲವಿ

ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ

- Advertisement -

Latest Posts

Don't Miss