Political News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಾವಾಗ ವಾಪಸ್ ಬರ್ತಾರೋ ಗೊತ್ತಿಲ್ಲ.ರಾಜಕಾರಣ ನಿಂತನೀರಲ್ಲ. ಎಷ್ಟು ದಿನ ಅಲ್ಲಿ ಇರ್ತಾರೋ. ಯಾವಾಗ ವಾಪಸ್ ಬರ್ತಾರೋ ಅದನ್ನ ಅಚ್ಚರಿ ಪಡಬೇಕಾಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ರೆಡಿಮೇಡ್ ಕ್ಷೇತ್ರ ಆಯ್ಕೆ ಮಾಡಿಕೊಂಡಿಲ್ಲ. ನಾನು ಯಾವಾಗಲೂ ಟಫ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ನೀವು ರೆಡಿಯಾಗೋಕೆ ಅನೇಕರ ಬಲಿದಾನ ಆಗಿದೆ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸೆಂಟ್ರಲ್ ಕ್ಷೇತ್ರದಲ್ಲಿ ಅನೇಕರ ಬಲಿದಾನದಿಂದ ನೀವು ರೆಡಿ ಆಗಿದ್ದು, ಚನ್ನಮ್ಮ ಹೋರಾಟದಲ್ಲಿ 6 ಜನ ಕಾರ್ಯಕರ್ತರು ಬಲಿಯಾಗಿದ್ರು. ನಾನು ರೆಡಿಮೇಡ್ ಫುಡ್ ಗೆ ಹೋಗಿಲ್ಲ. ಅನುದಾನ ತಾಂತ್ರಿಕ ದೋಷದಿಂದ ನಿಲ್ಲಿಸಿದ್ದೀನಿ ಎಂದಿದ್ದೆ. ಜಗದೀಶ್ ಶೆಟ್ಟರ್ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದು ತಾಂತ್ರಿಕ ದೋಷ ಅಲ್ಲ, ಕುತಂತ್ರ. 30 ವರ್ಷ ಗೆಲ್ಲಿಸಿದ ಜನರಿಗೆ ನೀವು ವಿಷಕಾರೋ ಕೆಲಸ ಮಾಡ್ತೀದಿರಿ.
ನಾನು ಯಾವುದೇ ಕಾಮಗಾರಿ ಬದಲಾವಣೆ ಮಾಡಿಲ್ಲ. ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಟೆಂಗಿನಕಾಯಿ ಹೇಳಿದ್ರು..
ಮುಖ್ಯಮಂತ್ರಿಗಳು ಶೆಟ್ಟರ್ ಹೋದ್ರೆ ಕೂರೋಕೆ ಕೊಡಲ್ಲ. ಜಗದೀಶ್ ಶೆಟ್ಟರ್ ಅವರನ್ನ ನಿಲ್ಲಿಸ್ತಾರೆ. ಅಷ್ಟು ಗೌರವ ಕಾಂಗ್ರೆಸ್ ಕೊಡ್ತಿದೆ ಎಂದು ವ್ಯಂಗ್ಯ ಮಾಡಿದ ಟೆಂಗಿನಕಾಯಿ, ನಾನು 10 ಕೋಟಿ ತಂದು ತೋರಿಸ್ತೀನಿ. ಸವಾಲ್ ಸ್ವೀಕರಿಸಿ ನಾನು ನಿಮಗೆ ಚಾಲೆಂಜ್ ಮಾಡ್ತೀನಿ. ನೀವು ವಿಧಾನ ಪರಿಷತ್ ಸದಸ್ಯರಿದ್ದೀರಿ. 200 ಕೋಟಿ ತಗೊಂಡು ಬನ್ನಿ ಎಂದು ಟೆಂಗಿನಕಾಯಿ ಸವಾಲ್ ಹಾಕಿದ್ರು.
ಜಗದೀಶ್ ಶೆಟ್ಟರ್ ರನ್ನ ಲೋಕಸಭೆ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನಾನು ಮನವಿ ಮಾಡ್ತೀನಿ. ಆದಷ್ಟು ಬೇಗ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ನಾನು ಜಗದೀಶ್ ಶೆಟ್ಟರ್ ಗೆ ಪಂಥಾಹ್ವಾನ ಕೊಡುತ್ತಿದ್ದೇನೆ. ಸಿಎಂ ಕೇಳಿದ್ರು ನಾನು ಅಭ್ಯರ್ಥಿ ಅಲ್ಲ ಅಂತಾರೆ. ಯಾಕೆ ಹೆದರ್ತೀರಿ ಎಂದು ಟೆಂಗಿನಕಾಯಿ ಟಾಂಗ್ ಕೊಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೊಟ್ರೆ ನಾವು ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸುತ್ತೇವೆ ಎಂದರು.
‘ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ’
‘ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದವರು ಈ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು’