Political News: ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ. ಅವರದು ಸ್ಟ್ಯಾಂಡ್ ಅಂದ್ರೆ ಬಸ್ಟ್ಯಾಂಡ್ ಇದ್ದ ಹಾಗೆ. ಯಾರ ಬೇಕಾದರೂ ಏನಾದರೂ ಮಾತಾಡ್ತಾರೆ. ಮಧ್ಯಪ್ರದೇಶದಲ್ಲಿ ಹನುಮಾನ್ ಚಾಲೀಸ್ ಮಾಡೋಕೆ ಹೋದ್ರು, ರಾಹುಲ್ ಗಾಂಧಿ ಜನಿವಾರ ಹಾಕಿದ್ರು. ಸಿದ್ದರಾಮಯ್ಯ 10 ಸಾವಿರ ಕೋಟಿ ಕೊಡ್ತೀನಿ ಅಂತಾರೆ. ಹೀಗೆ ತಾಳವಿಲ್ಲದೆ ಮಾತಾಡ್ತಾರೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿ, ಮನಮೋಹನ ಸಿಂಗ್ ಅವರು ಬಜೆಟ್ ಮೇಲೆ ಮುಸಲ್ಮಾನರಿಗೆ ಹಕ್ಕಿದೆ ಅಂತಾರೆ. ಮುಸಲ್ಮಾನರನ್ನು ತಪ್ಪು ದಾರಿಗೆ ಎಳೆಯೋದು ಗೊತ್ತಾಗುತ್ತದೆ. ಎಲ್ಲಿಯೂ ಹಿಜಾಬ್ ಬ್ಯಾನ ಇಲ್ಲ. ಇದನ್ನು ಮಾಧ್ಯಮದವರು ಸರಿಯಾಗಿ ಅನಾಲಿಸಿಸ್ ಮಾಡಬೇಕು. ವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಹಾಕ್ತಿವಿ ಅಂದ್ರೆ ನಾಳೆ ಒಬ್ರು ಕೇಸರಿ ಶಾಲು ಹಾಕೊಂಡು ಬರ್ತೀನಿ ಅಂತಾರೆ. ಸಿದ್ದರಾಮಯ್ಯನವರೇ ಏನ ಮಾಡೋಕೆ ಹೊರಟಿದ್ದೀರಿ. ನಿಮ್ಹು ಮುಠಾಳತನವೋ ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ತರ ಹೇಳಿಕೆ ಕೊಡ್ತಿದಿರೋ ಎಂದು ವಾಗ್ದಾಳಿ ನಡೆಸಿದರು.
ಸಮಾಜ ಒಡೆದು ವೋಟ್ ತಗೆದುಕೊಳ್ಳಬೇಕು ಅನ್ನೋದಾ. ಒಂದು ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ನೀವಿರೋದು. ಇದು ನಿಮ್ಮ ಸ್ಥಿತಿ. ಹೀಗೆ ನೀವು ಹುಚ್ಚ ಹುಚ್ಚರಾಗಿ ಮಾತಾಡಿದ್ರೆ ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸ್ತಾರೆ. ನೆನಪಿಟ್ಟುಕೊಳ್ಳಿ ಸಿದ್ದರಾಮಯ್ಯ ನಿಮ್ಮ ವೈಫಲ್ಯ ಮುಚ್ಚಲು, ಈ ರೀತಿ ವಿವಾದ ಹುಟ್ಟ ಹಾಕೋದು ನಿಮ್ಮ ಕೆಲಸವಾ..? ನಾವೇನಾದರೂ ಹಿಜಾಬ್ ವಿಷಯ ಎತ್ತದ್ವಾ ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಇಲ್ಲ. ನಿಮಗ್ಯಾಕೆ ಈ ಕೆಟ್ಟ ವಿಚಾರ ಸಿದ್ದರಾಮಯ್ಯನವರೇ..? ಗೊತ್ತಿಲ್ಲ ಅಂತಾ ಅಲ್ಲ. ಸಿದ್ದರಾಮಯ್ಯ ಮುಗ್ಧ ಅಲ್ಲ, ಸಿದ್ದರಾಮಯ್ಯ ಧೂರ್ತರಿದ್ದಾರೆ ಇದು ನನ್ನ ಗಂಭೀರ ಆರೋಪ ಎಂದರು.
ವೀರಶೈವ ಸಮಾವೇಶದಲ್ಲಿ ಜಾತಿ ಗಣತಿ ವಿರೋಧ ವಿಚಾರ, ಅದರಲ್ಲಿ ಕಾಂಗ್ರೆಸ್‌ನವರೇ ಜಾಸ್ತಿ ಇದ್ದಾರೆ. ಜಾತಿ ಗಣತಿ ಆಗಿಲ್ಲ, ಜಾತಿ ಸರ್ವೆ ಆಗಿದೆ. ವೈಜ್ಞಾನಿಕ ಜಾತಿ ಗಣತಿ ಆಗಬೇಕು ಅನ್ನೋದನ್ನ ನಾನು ಒಪ್ಪಕೋತಿನಿ. ಯತ್ನಾಳ್ ಬಹಿರಂಗವಾಗಿ ಮಾತಾಡಿರೋ ವಿಚಾರ, ಅವರ ಮಾತಾಡಿರೋದನ್ನ ನೋಡಿ ಸಂಭಂದಿಸಿದ ರಾಷ್ಟ್ರೀಯ ನಾಯಕರು ಕರೆದು ಮಾತಾಡ್ತಾರೆ. ಶಿವನಾಂದ ಪಾಟೀಲ್ ದು ಅತ್ಯಂತ ಬೇಜಾಬ್ದಾರಿ ಹೇಳಿಕೆ, ದೊಡ್ಡ ಸ್ಥಾನದಲ್ಲಿ ಇದ್ದವರು ಹೀಗೆ ಮಾತಾಡಬಾರದು. ಸರ್ಕಾರ ಬರಗಾಲದಲ್ಲಿ ಪರಿಹಾರ ನೀಡುತ್ತೆ. ಆದರೆ, ರೈತರಿಗೆ ಮಳೆ
ಬರಬೇಕು ಬೆಳೆ ಸಮೃದ್ಧವಾಗಿ ಬೇಕು ಆಗ ಅವರು ಯಾರ ಹತ್ತಿರ ಕೈಚಾವುದಿಲ್ಲ. ಶಿವಾನಂದ ಪಾಟೀಲ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್
ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?
ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್