Political News: ತಾನು ಸೋಮಾರಿ ಸಿದ್ದ ಅಂದಿದ್ದು ಸಿಎಂ ಸಿದ್ದರಾಮಯ್ಯನವರಿಗಲ್ಲ. ಅದೊಂದು ಆಡು ಭಾಷೆ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಪ್ರತಾಪ್ ಸಿಎಂ ಮಾಧ್ಯಮದವರೊಂದಿಗೆ ಮಾತನಾಡುವಾಗ, ಸಿಎಂ ಸಿದ್ದರಾಮಯ್ಯರಿಗೆ ಧಮ್, ತಾಕತ್ ಇದ್ದರೆ, ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ. ಆದರೆ ಈ ರೀತಿಯಾಗಿ ದ್ವೇಷದ ರಾಜಕಾರಣ ಮಾಡಬೇಡಿ. ರಾಜ್ಯದಲ್ಲಿ 28 ಜನ ಸಂಸದರಿದ್ದಾರೆ. ಆದರೆ ಪ್ರತಾಪ್ ಸಿಂಹ ಮಾತ್ರ ಯಾಕೆ ಟಾರ್ಗೇಟ್ ಆಗ್ತಾರೆ..? ನಾನು ಸೋಮಾರಿ ಸಿದ್ಧನ ರೀತಿ ಕುಳಿತು ಜಾತಿ ರಾಜಕಾರಣ ಮಾಡುತ್ತಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೇಟ್ ಆಗಿದ್ದೇನೆ ಎಂದು ಹೇಳಿದ್ದರು.
ಈ ಮಾತಿನ ವೇಳೆ ಸೋಮಾರಿ ಸಿದ್ಧ ಎಂಬ ಸಾಮಾನ್ಯ ಪದ ಬಳಕೆ ಬಂದ ಕಾರಣ, ಪ್ರತಾಪ್ ಸಿಂಹ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಅದಕ್ಕಾಗಿ ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದ್ದು, ನಾನು ಆಡು ಮಾತಿನಲ್ಲಿ ಹೇಳುವ ಮಾತನ್ನಷ್ಟೇ ಹೇಳಿದ್ದೇನೆ ವಿನಃ ಸಿಎಂ ಸಿದ್ದರಾಮಯ್ಯರಿಗೆ ಸೋಮಾರಿ ಸಿದ್ಧ ಎಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’
‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’