International News: ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ, ಆಂಧ್ರಪ್ರದೇಶ ಮೂಲದ 6 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರದ ಅಮಲಾಪುರಂನ 6 ಜನರು ಸಾವನ್ನಪ್ಪಿದ್ದು, ಇವರು ಸ್ಥಳೀಯ ಕಾಂಗ್ರೆಸ್ ಪಕ್ಷದ ಶಾಸಕರ ಸಂಬಂಧಿಗಳು ಎಂದು ತಿಳಿದುಬಂದಿದೆ.
ಅಮೆರಿಕದ ಜಾನ್ಸನ್ ಕೌಂಟಿಯಲ್ಲಿ ಡಿಸೆಂಬರ್ 26ರಂದು ಈ ಘಟನೆ ಸಂಬಂಧಿಸಿದ್ದು, ಮಿನಿವ್ಯಾನ್ ಮತ್ತು ಪಿಕಪ್ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಈ 6 ಜನ ರಜೆ ಇದ್ದ ಕಾರಣ, ಮೃಗಾಲಯಕ್ಕೆ ಹೋಗಿ ಬರುತ್ತಿದ್ದರು. ಕ್ರಿಸ್‌ಮಸ್ ರಜೆಯನ್ನು ಎಂಜಾಯ್ ಮಾಡಿಕೊಂಡು, ಆಗ ತಾನೇ ಮನೆಗೆ ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಇನ್ನು 7 ಜನ ವಾಹನದಲ್ಲಿದ್ದು, ಲೋಕೇಶ್ ಎಂಬುವವರು ಮಾತ್ರ ಬದುಕುಳಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಕಪ್ ವಾಹನ ಚಲಾಯಿಸುತ್ತಿದ್ದ ಡ್ರೈವರ್ ಮತ್ತು ಅದರಲ್ಲಿದ್ದ ಪ್ರಯಾಣಿಕನೊಬ್ಬನಿಗೂ ಗಾಯವಾಗಿದ್ದು, ಅವರನ್ನು ಸಹ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ. ಚಿಕಿತ್ಸೆ ಕೊಡಿಸಲಾಗುತ್ತಿದೆ.




