ಧಾರವಾಡದಲ್ಲಿ ಆ್ಯಕ್ಟಿವ್ ಆಗಿದೆ ಕೇಬಲ್ ಕತ್ತರಿಸುವ ವಿಚಿತ್ರ ಗ್ಯಾಂಗ್..

Dharwad News: ಧಾರವಾಡ: ಧಾರವಾಡದಲ್ಲಿ ಕೇಬಲ್ ಕಟ್ ಮಾಡುವ ವಿಕೃತ ಗ್ಯಾಂಗ್‌ ಆ್ಯಕ್ಟಿವ್ ಆಗಿದ್ದು, ಈ ವಿಚಿತ್ರ ಗ್ಯಾಂಗ್ ರಾತ್ರೋರಾತ್ರಿ ಕೇಬಲ್ ಕಟ್ ಮಾಡಿ, ಪರಾರಿಯಾಗುತ್ತದೆ.

ಇವರ ಉದ್ದೇಶವೇನು ಎಂಬುದನ್ನ ಆ ದೇವರೇ ಬಲ್ಲ. ಆದರೆ ಈ ಗ್ಯಾಂಗ್‌ನ ಇಬ್ಬರು ಸದಸ್ಯರು ಮಾತ್ರ, ಪ್ರತೀ ರಾತ್ರಿ ಬಂದು, ಟಿವಿ, ಇಂಟರ್‌ನೆಟ್ ಫೈಬರ್ ಕೇಬಲ್ ಕಟ್ ಮಾಡುತ್ತಾರೆ. ಈಗಾಗಲೇ ಧಾರವಾಡ ನಗರದ ಬಹುತೇಕ ಕಡೆ ವಿವಿಧ ಕಂಪನಿಗಳ ಕೇಬಲ್ ಕಟ್ ಮಾಡಿದ್ದಾರೆ. ಕಳೆದ 6 ತಿಂಗಳಿನಿಂದ ಇವರಿಗೆ ಇದೇ ಕೆಲಸವಾಗಿದ್ದು, ನಿನ್ನೆ ರಾತ್ರಿ ಕೇಬಲ್ ಕಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೇಬಲ್ ಆಪರೇಟರ್ ಮಾಲೀಕರ ಸಂಘದವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಲೆ ಬಾಳುವ ಕೇಬಲ್ ಕಟ್ ಮಾಡುವ ಹಿಂದಿನ ಉದ್ದೇಶ ನಿಗೂಢವಾಗಿದ್ದು, ಏರಟೇಲ್, ಜಿಯೋ, ಬಿಎಸ್ಎನ್ಎಲ್ ಫೈಬರ್ ಕೇಬಲ್ ಗಳಿಗೂ ಕತ್ತರಿ ಹಾಕಿದ್ದಾರೆ. ಹೀಗಾಗಿ ಈ ಕಂಪನಿಗಳ ಆಪರೇಟರ್‌ಗಳಿಗೆ ಕಂಟಕ ಎದುರಾಗಿದ್ದು, ಪದೇ ಪದೇ ಕೇಬಲ್ ಕಟ್ ಮಾಡುತ್ತಿರುವ ಹಿನ್ನೆಲೆ ಗ್ರಾಹಕರಿಂದಲೂ ದೂರು ಕೊಡಲಾಗಿತ್ತು. ಎಲ್ಲ ತಪ್ಪು ಕೇಬಲ್ ಆಪರೇಟರ್ ಮೇಲೆ ಬರುತ್ತಿತ್ತು.

ಇವರು ಸರಿಯಾಗಿ ಸರ್ವಿಸ್ ನೀಡುತ್ತಿಲ್ಲವೆಂದು ಗ್ರಾಹಕರೆಲ್ಲ ಆರೋಪಿಸುತ್ತಿದ್ದರು. ಆದರೆ ಕೇಬಲ್ ಕಟ್ ಮಾಡುತ್ತಿದ್ದುದ್ದು ಮಾತ್ರ ಈ ಕಿಡಿಗೇಡಿಗಳು ಎಂದು ತಿಳಿದುಬಂದಿದೆ. ಹಾಗಾಗಿ ಕೇಬಲ್ ಕತ್ತರಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಸಿಸಿ ಕ್ಯಾಮರಾ ದೃಶ್ಯ ಸಮೇತ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ

ಬಿಗ್‌ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ಸ್ಪರ್ಧಿಗಳ ಸರಸ..

ಅಯೋಧ್ಯೆ ರೈಲು ನಿಲ್ಧಾಣಕ್ಕೆ ‘ಅಯೋಧ್ಯಾ ಧಾಮ್’ ಎಂದು ಮರುನಾಮಕರಣ

About The Author