Hubballi News :ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಉಜ್ವಲ್ ಯೋಜನೆಯ ಗ್ಯಾಸ್ ಸಿಲಿಂಡರ್‌ಗಾಗಿ ಹುಬ್ಬಳ್ಳಿಯಲ್ಲಿ ಏಜೆನ್ಸಿಗಳ ಮುಂದೆ ಮಹಿಳೆಯರ ಸರದಿ ಸಾಲು ಕಂಡುಬರುತ್ತಿದೆ.
ನಗರದ ಹೆಡ್ ಪೋಸ್ಟ್ ಕಚೇರಿ ಬಳಿಯ ಹೆಚ್ ಪಿ ಹಾಗೂ ಭಾರತ ಗ್ಯಾಸ್ ಸಿಲಿಂಡರ್ ಏಜೆನ್ಸಿ ಮುಂಭಾಗದಲ್ಲಿ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ ಪಡೆಯಲು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟು ದಿನ ಖಾಲಿ ಖಾಲಿಯಾಗಿ ಕಾಣುತ್ತಿದ್ದ ನಗರದ ಬಹುತೇಕ ಗ್ಯಾಸ್ ಏಜೆನ್ಸಿಗಳಲ್ಲ ಮುಂದೆ ಮಹಿಳೆಯರ ಸರದಿ ಸಾಲು ಕಂಡು ಬರುತ್ತಿದೆ.
ಹೊಗೆ ಮುಕ್ತ ರಾಷ್ಡ್ರವನ್ನಾಗಿಸುವ ಉದ್ದೇಶದಿಂದ ಸ್ವಚ್ಚ ಭಾರತ ಬೆಹ್ತರ್ ಜೀವನ ಅಡಿಬರಹದೊಂದಿಗೆ ಕಳೆದ ಮೇ.1 2016 ರಂದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ಮು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಬಿಪಿಎಲ್ ಕಾರ್ಡ್ ಹೊಂದಿದ್ದರಿಗೆ ಉಚಿತ ಗ್ಯಾಸ್ ಸಲಿಂಡರ್ ನೀಡಲಾಗುತ್ತಿದೆ.
ಆರಂಭದಲ್ಲಿ ಯೋಜನೆಗೆ ಉತ್ತಮ ರಸ್ಪಾನ್ಸ್ ವ್ಯಕ್ತವಾಗಿದ್ದು, ಮತ್ತೆ ಯೋಜನೆ ಮುಂದುವರಿಸಿದ್ದ ಬೆನ್ನಲೇ ಹುಬ್ಬಳ್ಳಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನಯ ಉಚಿತ ಸಿಲಿಂಡರ್‌ಗಾಗಿ ಈಗ ಮಹಿಳೆಯರು ಸರದಿ ಸಾಲು ಹಚ್ಚಿದ್ದಾರೆ.
‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’
‘ಕನ್ನಡ ನಾಮಫಲಕ ಹಾಕುವ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿರಿ’