Wednesday, August 6, 2025

Latest Posts

40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ: ಗೋವಿಂದ ಕಾರಜೋಳ

- Advertisement -

Political News: ಹುಬ್ಬಳ್ಳಿ: ರಾಜ್ಯದಲ್ಲಿ ಬ್ರಷ್ಟಾಚಾರಕ್ಕಾಗಿ ಆಡಳಿತ ನಡೆದಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಹೇಗೆ ದುಡ್ಡು ವಸೂಲಿ ಮಾಡಬೇಕು ಅನ್ನೋದೆ ಚಿಂತೆ. ನಾವು ಮಂಜೂರು ಮಾಡಿದ ಕೆಲಸ ನಿಲ್ಲಿಸಿ ಲಂಚ ಕೇಳತೀದಾರೆ. ಸರ್ಕಾರಿ ನೌಕರರನ್ನು ಎಷ್ಟು ಟ್ರಾನ್ಸಫರ್ ಮಾಡೋದು.? ಅದೇ ಒಂದು ಉದ್ಯೋಗ ಆಗಿದೆ ಕಳೆದ ಆರು ತಿಂಗಳಿಂದ. ಮೇ ದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸಮಯದಲ್ಲಿ ನೂರೆಂಟು ಸಂಸಾರ ಸಮಸ್ಯೆ ಇರತ್ತೆ. ಆ ಸಮಯದಲ್ಲಿ ಟ್ರಾನ್ಸಫರ್ ಮಾಡಿದ್ರೆ ಅವರೇನು ಆತ್ಮಹತ್ಯೆ ಮಾಡಿಕೊಳ್ಳಬೇಕಾ..? ಎಂದು ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ಸರ್ಕಾರಿ ನೌಕರರಿಗೆ ದೊಡ್ಡ ಕಿರುಕುಳ ಇದೆ. 40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ. ಎಲ್ಲೋ ಇದ್ದವರನ್ನು ಟ್ರಾನ್ಸಫರ್ ಮಾಡಿದ್ರೆ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬೇಕು. ಅನೇಕ ಜನ ವಿಷ ತಗೆದುಕೊಂಡಿದ್ದಾರೆ ಎನ್ನುವ ಮೂಲಕ, ಪರೋಕ್ಷವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳೋ ಪರಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.

ಸರ್ಕಾರಿ ವರ್ಗಾವಣೆ ಉದ್ಯೋಗ ಆಗಬಾರದು. ವರ್ಗಾವಣೆ ಮಾಡಿ ಸುಗ್ಗಿ ಮಾಡ್ತೀನಿ ಅಂದ್ರೆ ಯಾರೂ ಒಪ್ಪಲ್ಲ. ರಾಜ್ಯದಲ್ಲಿ ಇವತ್ತು ಚುನಾವಣೆ ನಡೆದ್ರೆ ಕಾಂಗ್ರೆಸ್ 10 ಸೀಟ್ ಬರಲ್ಲ. ರಾಜ್ಯದಲ್ಲಿ 52 ಪರ್ಸೆಂಟ್ ಸರ್ಕಾರ ಇದೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ರು. ಕಾಂಗ್ರೆಸ್ ಮುಳುಗೋ ಹಡಗು, ಮುಳುಗೋ ಹಡಗಿಗೆ ಖರ್ಗೆ ಅವರನ್ನು ನಾಯಕನನ್ನು ಮಾಡಿದ್ದಾರೆ ಎಂದು ಕಾರಜೋಳ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ದಲಿತ ಸಿಎಂ ಕೂಗು ಇದ್ದಾಗ ಇವರನ್ನು ಸಿಎಂ ಮಾಡಿಲ್ಲ. ಪರಮೇಶ್ವರ ಅವರನ್ನು ಕುತಂತ್ರದಿಂದ ಸೋಲಸಿದ್ರು. ಕೆಪಿಸಿಸ ಕಚೇರಿಯಲ್ಲಿ ವೋಟಿಂಗ್ ಆದಾಗ ಖರ್ಗೆ ಅವರಿಗೆ ವೋಟ್ ಬರಲಿಲ್ಲ. ಕೆಪಿಸಿಸಿ ಕಚೇರಿಯಿಂದ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕುತ್ತಾ ಹೊರಬಂದರು. ಕಾಂಗ್ರೆಸ್ ಅಧಿಕಾರಕ್ಕೆ ಬರದೆ ಇದ್ದಾಗ ಇವರ ಹೆಸರು ಹೇಳ್ತಾರೆ. ನರೇಂದ್ರ ಮೋದಿ ಅವರ ಕಾಲದಲ್ಲಿ ಕಾಂಗ್ರೆಸ್ ಈ ದೇಶದಲ್ಲಿ ಇಂಪ್ರೂವ್ ಮೆಂಟ್ ಆಗಲ್ಲ. ಇದೀಗ ಖರ್ಗೆ ಅವರ ಹೆಸರೇಳೋದು ಮೋಸದಾಟ. ರಾಹುಲ್ ಗಾಂಧಿ ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಆರೋಪಗಳಿಗೆ ನಾನು ಉತ್ತರಿಸಲ್ಲ ಎಂದು ಹೇಳಿರುವ ಗೋವಿಂದ ಕಾರಜೋಳ, ನಾವು ನಿನ್ನೆ ಬೆಂಗಳೂರಲ್ಲಿ ಚರ್ಚಿಸಿದ್ದೇವೆ. ನಮ್ಮ ಗುರಿ ಏನಿದ್ದರೂ ಮುಂದಿನ ಲೋಕಸಭಾ ಚುನಾವಣೆ. ಪ್ರಧಾನಿ ಮೋದಿ ಮಾಡಿರುವ ಯೋಜನೆಗಳ ಬಗ್ಗೆ ತಿಳಿಸಿ ಹೇಳೋದು. ನಮ್ಮ ಸರ್ಕಾರ ಕೊಟ್ಟ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ಹಾಲು ಕುಡಿದೆ ಸಾಯ್ತಾರೆ ಅನ್ನುವಾಗ ಅವರಿಗೆ ವಿಷ ಯಾಕೆ ಕೊಡಬೇಕು..? 40 ಕ್ಕಿಂತ ಹೆಚ್ಚು ಶಾಸಕರು ಅತೃಪ್ತರಾಗಿದ್ದಾರೆ. ಬಿ ಆರ್ ಪಾಟೀಲ್, ರಾಯರೆಡ್ಡಿ ಅಂಥವರು ಅಸಮಾಧಾನವನ್ನು ಹಾಕಿದ್ದಾರೆ. ಉಳಿದವರು ಹೇಳೋ ಧೈರ್ಯ ಮಾಡ್ತಿಲ್ಲ ಅಷ್ಟೇ..? ನಾವು ಯಾವ ಶಾಸಕರ ಸಂಪರ್ಕದಲ್ಲಿಯೂ ಇಲ್ಲ. ಹಾಲು ಕುಡಿದು ಸಾಯ್ತಾರೆ ಅಂತ ಗೊತ್ತಿದೆ. ಹೀಗಿರುವಾಗ ಅವರಿಗೆ ವಿಷ ಯಾಕೆ ಕೊಟ್ಟು ಪಾಪ ಕಟ್ಕೊಬೇಕು ಎಂದು ಗೋವಿಂದ ಕಾರ್ಜೋಳ ಕಾಂಗ್ರೆಸ್ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಸೋಮಣ್ಣ, ಸೋಮಶೇಖರ್ ಸೇರಿ ಯಾರು ಪಕ್ಷ ಬಿಟ್ಟು ಹೋಗಲ್ಲ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಯಾರೂ ಹೋಗೋ ಧೈರ್ಯ ಮಾಡ್ತಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೆ. ಬಿಜಾಪುರ ಕ್ಷೇತ್ರ ಸೇರಿ ಯಾವುದೇ ಕ್ಷೇತ್ರವನ್ನು ನಾನು ಕೇಳಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಕಾರಜೋಳ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಕ್ಕೆ ಬರುವ ಎಲ್ಲಾ ಆದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಅನುದಾನ ತೆಗೆದಿಟ್ಟು ಬೇರೆ ಕೆಲಸಗಳನ್ನು ಮಾಡಬೇಕು. ಕಾಂಗ್ರೆಸ್ ಬಂದ ಮೇಲೆ ಒಂದು ಕಾಮಗಾರಿ ಸ್ಯಾಂಕ್ಷನ್ ಆಗಿಲ್ಲ. ಮಹದಾಯಿಗೆ ಸಾವಿರ ಕೋಟಿ ತೆಗೆದಿಟ್ಟು ಟೆಂಡರ್ ಕರೆದಿದ್ದೆವು. ನಾವು ತೆಗೆದಿಟ್ಟ ಹಣವನ್ನೂ ವಾಪಸ್ ಪಡೆದಿದ್ದಾರೆ.  ಮಹದಾಯಿ ಯೋಜನೆ ಟೆಂಡರ್ ಸಹ ಕರೆದಿದ್ದೆವು. ಅದನ್ನು ಮುಂದುವರಿಸಿಕೊಂಡು ಹೋಗುವ ಬದಲಿಗೆ ಕಾಂಗ್ರೆಸ್ ಗಿಮಿಕ್ ಮಾಡ್ತಿದೆ ಎಂದು ಕಾರಜೋಳ ಹೇಳಿದ್ದಾರೆ.

‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’

‘ಕನ್ನಡ ನಾಮಫಲಕ ಹಾಕುವ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿರಿ’

‘ಬಿಜೆಪಿಗರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ..?’

- Advertisement -

Latest Posts

Don't Miss