Hubballi News: ಹುಬ್ಬಳ್ಳಿ: ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಜ.೧ ರಂದು ಬೆಳಿಗ್ಗೆ ೧೦.೩೦ಕ್ಕೆ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ೨೦೬ನೇ ಭೀಮಾ ಕೊರೇಗಾಂವ್ ಶೌರ್ಯ ಯೋಧರ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುರೇಶ ಖಾನಾಪುರ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಗಬ್ಬೂರ ರಾಷ್ಟಿçÃಯ ಹೆದ್ದಾರಿಯಿಂದ ಮುಖ್ಯ ಅಂಚೆ ಕಚೇರಿವರೆಗೆ ವಾದ್ಯ, ಕಲಾಮೇಳಗಳೊಂದಿಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ೧೮೧೮ ರಲ್ಲಿ ಭೀಮಾ ಕೋರೆಗಾಂವ್ ಅಸ್ಪೃಶ್ಯತೆ ವಿಮೋಚನೆ ಯುದ್ಧದ ಇತಿಹಾಸ ತಿಳಿದ ಮೇಲೆ ಪ್ರತಿ ವರ್ಷ ಜ.೧ ರಂದು ಜಗತ್ತಿನ ಯಾವುದೇ ಸ್ಥಳವಿದ್ದರೂ ಆ ದಿನ ವೀರ ಯೋಧರಿಗೆ ಸ್ಮರಣೆ ಮಾಡಲು ಕೋರೆಗಾಂವ್ಗೆ ಬರುತ್ತಿದ್ದರು. ಈ ನಿಟ್ಟಿನಲ್ಲಿ ನಾವು ಹುಬ್ಬಳ್ಳಿಯಲ್ಲಿ ಭೀಮಾ ಕೊರೇಗಾಂವ್ ಶೌರ್ಯ ಯೋಧರ ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಸಿದ್ಧಾರ್ಥ ಮಲ್ಲಮ್ಮನವರ, ಶ್ರೀಧರ ಕಂಗಲ್, ಕೆಂಚಪ್ಪ ಮಲ್ಲಮ್ಮನವರ, ಸುರೇಶ ಶಿವಣ್ಣವರ ಇತರರು ಇದ್ದರು.
‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’
‘ಕನ್ನಡ ನಾಮಫಲಕ ಹಾಕುವ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿರಿ’




