31 ವರ್ಷ ಹಳೆಯ ಕೇಸ್ ರಿಓಪನ್- ಬಿಜೆಪಿ ನಾಯಕರಿಂದ ಆಕ್ರೋಶ

Political News: ರಾಮಜನ್ಮಭೂಮಿ ಹೋರಾಟದ ಕೇಸನ್ನು ರಿಓಪನ್ ಮಾಡಿ, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಅರೆಸ್ಟ್ ಮಾಡಿದ್ದಕ್ಕಾಗಿ, ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ನೂರಾರು ವರ್ಷಗಳ ತಪಸ್ಸು, ತ್ಯಾಗ, ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಲೋಕಾರ್ಪಣೆಗಾಗಿ ಸಮಸ್ತ ಹಿಂದೂ ಸಮಾಜವೇ ಸಂಭ್ರಮಿಸುತ್ತಿದೆ. ಇಂತಹ ಸಮಯದಲ್ಲಿ ಅಯೋಧ್ಯೆ ಹೋರಾಟದ ಕರಸೇವಕರ ಮೇಲಿನ 31 ವರ್ಷಗಳ ಹಳೆಯ ಕೇಸನ್ನು ಕಾಂಗ್ರೆಸ್ ಪಕ್ಷ ಮತ್ತೆ ತೆರೆದು ದ್ವೇಷ ರಾಜಕಾರಣವನ್ನು ಮುಂದುವರೆಸಿದೆ. ಸಮಾಜದ ಶಾಂತಿ ಕದಡುವ ಮತಾಂಧ ಶಕ್ತಿಗಳನ್ನು ಅಮಾಯಕರು, ಬ್ರದರ್ಸ್ ಗಳೆಂದು ಕೇಸ್ ಹಿಂಪಡೆಯುವ ಕಾಂಗ್ರೆಸ್, ರಾಮಭಂಟರಾದ ಕರಸೇವಕರನ್ನು ಬಂಧಿಸಿ ಅವಮಾನಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಂದಿನಿಂದ ಇಂದಿನವರೆಗೂ ರಾಮಮಂದಿರದ ವಿರುದ್ಧವಾಗಿಯೇ ಇದೆ. ಇದೀಗ ಭವ್ಯ ರಾಮಮಂದಿರದ ನಿರ್ಮಾಣ ಸಹಿಸದೆ ಹತಾಶೆಯನ್ನು ಹೊರಹಾಕುತ್ತಿದೆ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಕಿಡಿಕಾರಿದ್ದಾರೆ.

ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮತಾಂಧ ಶಕ್ತಿಗಳನ್ನು ಅಮಾಯಕರು, ಬ್ರದರ್ಸ್ ಗಳು ಎಂದು ಅವರ ವಿರುದ್ಧದ ಕೇಸ್ ಹಿಂಪಡೆಯುವ ಕಾಂಗ್ರೆಸ್, ರಾಮಭಂಟರಾದ ಕರಸೇವಕರಿಗೆ ಅವಮಾನಿಸುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವದನ್ನು ಸಹಿಸದ ಕಾಂಗ್ರೆಸ್, 31 ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿ ಸನಾತನಿಗಳನ್ನು ಕೆಣಕುತ್ತಿದೆ.

ಸದಾಕಾಲ ಸನಾತನ ಹಿಂದೂಗಳ ವಿರುದ್ಧ ವಿಷಕಾರುವ ಕಾಂಗ್ರೆಸ್ ಪಕ್ಷ ಈಗ ಮತ್ತಷ್ಟು ನೀಚಮಟ್ಟಕ್ಕೆ ಇಳಿದಿದೆ. ನೂರಾರು ವರ್ಷಗಳ ಹೋರಾಟ, ತಪಸ್ಸಿನ ಫಲವಾದ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುವ ಹೊತ್ತಿನಲ್ಲೇ, ರಾಮಮಂದಿರಕ್ಕಾಗಿ ಹೋರಾಡಿದ ಕರಸೇವಕರನ್ನು ಬಂಧಿಸುವ ಮೂಲಕ ಸನಾತನ ಹಿಂದೂಗಳನ್ನು ಕೆಣಕುತ್ತಿದೆ ಎಂದು ನಳೀನ್ ಕುಮಾರ್ ಕಟೀಲ್ ಕೂಡ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ಯಡಿಯೂರಪ್ಪ ಸೇರಿ ಅನೇಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದನೆಗಳ ಮಹಾಪೂರ..

‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’

‘ನನ್ನನ್ನೂ ಬಂಧಿಸುತ್ತೀರಾ..? ಧೈರ್ಯಾ ಇದೆಯಾ ಈ ಸರ್ಕಾರಕ್ಕೆ..?’

About The Author