ನಗರದಲ್ಲಿ ಎರಡು ಹೆಚ್ಚುವರಿ ಪೊಲೀಸ್ ಠಾಣೆ ಆರಂಭ ಮಾಡಿ.. ಜಿಲ್ಲಾಧಿಕಾರಿಗೆ ಕರವೇ ಕಾರ್ಯಕರ್ತರ ಮನವಿ

Dharwad News: ಧಾರವಾಡ: ಧಾರವಾಡ ನಗರದಲ್ಲಿ ಎರಡು ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ಆರಂಭ ಮಾಡುವಂತೆ ಒತ್ತಾಯಿಸಿ ಕರವೇ ಸಂಘಟನೆಯಿಂದ ಪ್ರತಿಭಟನೆಯನ್ನು ಮಾಡಲಾಯಿತು. ಹೌದು ದಿನದಿಂದ ದಿನಕ್ಕೆ ನಗರದಲ್ಲೂ ಕೂಡಾ ಜನಸಂಖ್ಯೆ ಹೆಚ್ಚಾಗುತ್ತಿದ್ದು ಹೀಗಾಗಿ ಹೆಚ್ಚುವರಿಯಾಗಿ ಎರಡು ಪೊಲೀಸ್ ಠಾಣೆಗಳನ್ನು ಆರಂಭ ಮಾಡುವಂತೆ ಒತ್ತಾಯವನ್ನು ಮಾಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ಈ ಒಂದು ಹೋರಾಟವನ್ನು ಮಾಡಲಾಯಿತು.

ಪಾಪು ಧಾರೆ, ಮಂಜುನಾಥ ಲೂತಿಮಠ ನೇತ್ರತ್ವದಲ್ಲಿ ಈ ಒಂದು ಹೋರಾಟ ನಡೆಯಿತು. ಕರ್ನಾಟಕ ರಕ್ಷಣಾ ವೇದಿಯ ಪ್ರವೀಣ ಶೆಟ್ಟಿ ಬಣದಿಂದ ಈ ಒಂದು ಪ್ರತಿಭಟನೆ ನಡೆಯಿತು. ನಗರದಲ್ಲಿ ಎರಡು ಹೆಚ್ಚುವರಿಯಾಗಿ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಆಗ್ರಹಿಸಿ ಈ ಒಂದು ಹೋರಾಟ ನಡೆಯಿತು. ಧಾರವಾಡ ನಗರ ದಿನದಿಂದ ದಿನಕ್ಕೆ ವೇಗವಾಗಿ ಜನಸಂಖ್ಯೆ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಠಾಣೆಗಳನ್ನು ನಿರ್ಮಿಸುವಂತೆ ಆಗ್ರಹವನ್ನು ಮಾಡಲಾಯಿತು.ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಈ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹವನ್ನು ಮಾಡಲಾಯಿತು.ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ನಿರ್ಮಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದರು.

ಈ ಒಂದು ಪ್ರತಿಭಟನೆಯಲ್ಲಿ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ, ಧಾರವಾಡ ಜಿಲ್ಲಾ ಅಧ್ಯಕ್ಷ ಮಂಜುನಾಥ ಲೂತಿಮಠ, ಸಾಧಿಕ್ ಶೇರೆವಾಡ,ಮಮತಾಜ್ ನೀಲಿವಾಲೆ,ಸುರೇಶ ಕುಂಬಾರ,ಮಾರುತಿ ನುಗ್ಗಿಕೇರಿ,ಶೈಲಜಾ ಚಿಕ್ಕನಗೌಡರ,ಪಾರ್ವತಿ ಶಿಂಧೆ,ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಕರಸೇವಕರ ಬಂಧನದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ, ನಿರಪರಾಧಿಗಳನ್ನು ಕೂಡಾ ಬಂಧಿಸಿಲ್ಲ’

‘ಶ್ರೀರಾಮನೇ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್, ಈಗ ಈ ರೀತಿ ಹೇಳಿಕೆ ಕೊಟ್ಟು ಹಿಂದೂ ಸಮಾಜವನ್ನು ಕೆಣಕುತ್ತಿದೆ’

31 ವರ್ಷ ಹಳೆಯ ಕೇಸ್ ರಿಓಪನ್- ಬಿಜೆಪಿ ನಾಯಕರಿಂದ ಆಕ್ರೋಶ

About The Author