Dharwad News: ಧಾರವಾಡ : ತಡಕೋಡ ಗ್ರಾಮದ ರತ್ನವ್ವ ಹೆಂಡಗಾರ ಕೊಲೆ ಪ್ರಕರಣ ಖಂಡಿಸಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಹಾಗೂ ಕಾರ್ಮಿಕ ಸಂಘಟನೆಗಳ ಸದಸ್ಯರು ಧಾರವಾಡ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೋಲೀಸ್ ಅಧಿಕಾರಿಗಳು ವಿಫಲವಾಗಿದ್ದು, ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ನೀಡಿ ರತ್ನವ್ವ ಹೆಂಡಗಾರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಕರಸೇವಕರ ಬಂಧನದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ, ನಿರಪರಾಧಿಗಳನ್ನು ಕೂಡಾ ಬಂಧಿಸಿಲ್ಲ’
ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ದುಃಖವಿಲ್ಲವೇ..?: ಮುಸ್ಲಿಮರಿಗೆ ಓವೈಸಿ ಪ್ರಶ್ನೆ..



