Hubballi News: ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಹಿನ್ನೆಲೆಯಲ್ಲಿ, ಏಕಾಏಕಿ ಹುಬ್ಬಳ್ಳಿಯಲ್ಲಿ ಎಸ್.ಎಸ್.ಕೆ ಸಮಾಜದಿಂದ ಮಾಧ್ಯಮಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಸರ್ಕಾರ ಹಿಂದೂ ಸಮಾಜವನ್ನ ಟಾರ್ಗೆಟ್ ಮಾಡುತ್ತಿದೆ. ರಾಮಜನ್ಮ ಭೂಮಿ ಹೋರಾಟಗಾರನ ಬಂಧನ ಖಂಡನೀಯ. ಎಸ್.ಎಸ್.ಕೆ. ಸಮಾಜದ ಹಿಂದೂ ಕಾರ್ಯಕರ್ತರನ್ನ ಪೊಲೀಸರು ಟಾರ್ಗೆಟ್ ಮಾಡಿದ್ದಾರೆಂದು ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ ಕಿಡಿಕಾರಿದ್ದಾರೆ.
ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧನ ಮಾಡಿದ್ದು ದುರುದ್ದೇಶದಿಂದ ಕೂಡಿದೆ. ನಾಳಿನ ಬಿಜೆಪಿ ಪ್ರತಿಭಟನೆಗೆ ನಮ್ಮ ಸಮಾಜ ಸಂಪೂರ್ಣ ಬೆಂಬಲ ನೀಡುತ್ತೆ. ಶ್ರೀಕಾಂತ್ ಪೂಜಾರಿ ಕುಟುಂಬಕ್ಕೆ ಸಕಲ ನೆರವು ನೀಡುತ್ತೇವೆ. ಬಂಧಿತರನ್ನು ಕೂಡಲೆ ಜೈಲಿನಿಂದ ಬಿಡುಗಡೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆ ಯಾರನ್ನೂ ಬಂಧಿಸಬಾರದು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ತುಳಿದು ಮುಸ್ಲಿಮರ ವೋಟ್ ಪಡೆಯಲು ಸ್ಕೇಚ ಹಾಕುತ್ತಿದ್ದಾರೆ.ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ದುಃಖವಿಲ್ಲವೇ..?: ಮುಸ್ಲಿಮರಿಗೆ ಓವೈಸಿ ಪ್ರಶ್ನೆ..
ರಾಮ ಮಂದಿರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡ್ತಿದೆ: ಶಾಸಕ ಅಬ್ಬಯ್ಯ ಕಿಡಿ
ರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನ: ಕೇಂದ್ರ ಸಚಿವ ಜೋಶಿ ವಾಗ್ದಾಳಿ




