Hubballi News: ಹುಬ್ಬಳ್ಳಿ : ರಾಮ ಜನ್ಮಭೂಮಿ ಹೋರಾಟಗಾರನ ಬಂಧನ ಹಿನ್ನೆಲೆಯಲ್ಲಿ, ಬಂಧಿತ ಶ್ರೀಕಾಂತ್ ಪೂಜಾರಿ ಮನೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದರು. ಇಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಚನ್ನಪೇಟೆ ಬಳಿ ಇರೋ ಶ್ರೀಕಾಂತ್ ನಿವಾಸಕ್ಕೆ ಪ್ರಮೋದ್ ಮುತಾಲಿಕ ಅವರು ಭೇಟಿ ಮುಗೀತಾ ಇದ್ದಂತೆ. ಮತ್ತೊಂದು ಕಡೆ ಕಾಂಗ್ರೆಸ್ ನಿಂದಲೂ ಹೋರಾಟ ಅಸ್ತ್ರ ಆರಂಭವಾಗಿದೆ.
ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಲು ಮುಂದಾದ ಕಾಂಗ್ರೆಸ್, ಬುಧವಾರ ಪ್ರತಿಭಟನಾ ವೇಳೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ಘೋಷಣೆ ಕೂಗಿದವರ ವಿರುದ್ಧ, ದೂರು ನೀಡಲು ಮುಂದಾಗಿದೆ. ಜೊತೆಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಧಾರವಾಡ ಜಿಲ್ಲೆಯ ಮಹಿಳಾ ಘಟಕದಿಂದ ಪ್ರತಿಭಟನೆ ಹಾಗೂ ದೂರು ನೀಡಲು ನಿರ್ಧರಿಸಿದ್ದಾರೆ.
ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದವರ ವಿರುದ್ಧ ಪ್ರತಿಭಟನೆ ಮಾಡಲಿರುವ ಮಹಿಳಾ ಕಾಂಗ್ರೆಸ್ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಿದ್ದಾರೆ.
ಗೋಧ್ರಾ ವಿವಾದಾತ್ಮಕ ಹೇಳಿಕೆ: ಹರಿಪ್ರಸಾದರನ್ನು ಬಂಧಿಸಿ ಎಂದ ಪ್ರಮೋದ್ ಮುತಾಲಿಕ್
ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್
ಜೋಶಿ ಬದಲು ಶ್ರೀಕಾಂತ್ ಗೆ ಟಿಕೆಟ್ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್..!




