ವೈದ್ಯೆಗೆ ಹೆಚ್ಚು ಹಣ ಮಾಡುವ ಆಸೆ ತೋರಿಸಿ ವಂಚನೆ – ಸೈಬರ್ ಠಾಣೆಯಲ್ಲಿಪ್ರಕರಣ ದಾಖಲು

Hubballi News: ಹುಬ್ಬಳ್ಳಿ : ವೈದ್ಯೆಗೆ ಕರೆ ಮಾಡಿದ ಸೈಬರ್ ವಂಚಕನೊಬ್ಬ 5 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ ರಿವೀವ್ ಮಾಡಿದರೆ ಹೆಚ್ಚು ಹಣ ಗಳಿಸಬಹುದೆಂದು ನಂಬಿಸಿ ವಂಚನೆ ಮಾಡಿದ್ದು, ಸತ್ತೂರಿನ ವೈದ್ಯೆಯೊಬ್ಬರಿಂದ 5.91 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ.

ವೈದ್ಯೆಯ ವಾಟ್ಸ್ ಆ್ಯಪ್ ನಂಬರ್‌ಗೆ ಸಂಪರ್ಕಿಸಿದ್ದ ವಂಚಕರು, ಮೊದಲು ಸ್ವಲ್ಪ ಹಣ ಕೊಟ್ಟು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ ಪ್ರಿಪೇಯ್ಡ್ ಟಾಸ್ಕ್ ಕೊಡುವುದಾಗಿ ನಂಬಿಸಿದ್ದರು. ಕಮಿಷನ್ ಕೊಡುವ ಭರವಸೆ ನಂಬಿ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿದ್ದ ವೈದ್ಯೆಯ ಖಾತೆಯಿಂದ 5,91,200 ರೂ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನ್ನಪೂರ್ಣಿ ಸಿನಿಮಾ ಡೈಲಾಗ್ ವಿರುದ್ಧ ರಾಮಭಕ್ತರ ಆಕ್ರೋಶ..!

‘ದೇಶದ ಜನತೆ ಈ ಬಾರಿ ಇಂಥ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.’

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

About The Author