15 ರಂದು ಬಣಜಿಗ ಬಂಧುಗಳ ಸಂಕ್ರಾಂತಿ ಸಂಭ್ರಮ

Hubballi News: ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಬಣಜಿಗ ಬಂಧುಗಳ ಸಂಕ್ರಾಂತಿ ಸಂಭ್ರಮಜ. 15ರಂದು ಸೋಮವಾರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ಚೌಹಾನ್ ಗ್ರೀನ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಈ ಸಂಕ್ರಾಂತಿ ಸಂಭ್ರಮ ದ ಅಧ್ಯಕ್ಷ ಶ್ರೀ ರಾಜು ಶೀಲವಂತರ್ ಹಾಗೂ ಎಸ್ .ವಿ. ಅಂಗಡಿ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಣಜಿಗ ಸಮಾಜವು ವ್ಯಾಪಾರದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಮಾಜ. ಈ ಸಮಾಜದಲ್ಲಿನ ಎಲ್ಲ ಜನರನ್ನು ಒಂದುಗೂಡಿಸಲು ಕಳೆದ ಐದಾರು ವರ್ಷಗಳಿಂದ ಸಂಕ್ರಾಂತಿ ಸಂಭ್ರಮವನ್ನು ಸಡಗರದಿಂದ ಆಚರಿಸುತ್ತ ಬಂದಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಸಂಪ್ರದಾಯ ಉಡುಗೆ ತೊಡುಗೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ .ಆದರೆ ಪ್ರಾಚೀನ ನಮ್ಮ ಉಡುಪುಗಳು ಹಾಗೂ ವೈವಿಧ್ಯಮಯ ಆಹಾರವನ್ನು ಇಂದಿನ ಸಮುದಾಯ ಮರೆಯದಿರಲಿ ಎಂಬ ಉದ್ದೇಶದಿಂದ ಬಣಜಿಗ ಬಂಧುಗಳೆಲ್ಲ ಸೇರಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಅಂದು ಪುರುಷರು ಧೋತಿ, ನೆಹರು ಶರ್ಟು, ಶೆಟ್ಟರ ಟೊಪ್ಪಿಗೆಯನ್ನು ಧರಿಸುತ್ತಾರೆ. ಮಹಿಳೆಯರು ಇಳಕಲ್ ಸೀರೆ ಮತ್ತು ಹಾಗೂ ಆಭರಣಗಳನ್ನು ಧರಿಸುವ ಮೂಲಕ ನಮ್ಮ ಮೂಲ ಸಂಪ್ರದಾಯವನ್ನು ಮತ್ತೊಮ್ಮೆ ಮೆಲುಕು ಹಾಕಲು ಹಾಕಲು ಇದೊಂದು ಅವಕಾಶ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರಾಯನಾಳದ ಶ್ರೀ ಅಭಿನವ ರೇವಣಸಿದ್ದ ಮಹಾಸ್ವಾಮಿಗಳು ಹಾಗೂ ಬಂಡಿವಾಡ ,ಅಣ್ಣಿಗೇರಿ ಗಿರೀಶ ಆಶ್ರಮದ ಡಾ. ಎಸಿ. ವಾಲಿ ಮಹಾರಾಜರು ವಹಿಸಲಿದ್ದಾರೆ. ಸಮಾರಂಭವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಉದ್ಘಾಟಿಸುವರು.

ಸಂಕ್ರಾಂತಿ ಸಂಭ್ರಮದ ಅಧ್ಯಕ್ಷರಾದ ಹಾಗೂ ಎಪಿಎಂಸಿ ಉದ್ಯಮಿಗಳಾದ ಶ್ರೀ ರಾಜು ಶೀಲವಂತರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಶ್ರೀ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದರು ಹಾಗೂ ಖ್ಯಾತ ಉದ್ಯಮಿಗಳಾದ ಶ್ರೀ ವಿಜಯ ಸಂಕೇಶ್ವರ್, ಕೆಲ್ ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಂಕ್ರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್, ಖ್ಯಾತ ಉದ್ಯಮಿಗಳಾದ ಶ್ರೀ ವಿಜಯಕುಮಾರ್ ಶೆಟ್ಟರ್ ,ಶ್ರೀ ವೀರೇಂದ್ರ ಕೌಜಲಗಿ ಹಾಗೂ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಆನಂದ ಉಪ್ಪಿನ ಹಾಗೂ ಸಮಾಜದ ಹಿರಿಯರಾದ ಶ್ರೀ ಎಸ್. ವಿ .ಅಂಗಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಂಕ್ರಾಂತಿಯಂದು ಚಿಕ್ಕ ಮಕ್ಕಳಿಗಾಗಿ ವಿಶೇಷ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನಾತ್ಮಕ ಆಟಗಳು ಈ ಸಂದರ್ಭದಲ್ಲಿ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಇದರ ಜತೆಗೆ ಶ್ರೀ ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರಿಂದ ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಹಲವಾರು ಕಲಾವಿದರಿಂದ ನಗೆ ಹಬ್ಬ ಕಾರ್ಯಕ್ರಮ ಸಹ ಈ ಸಂದರ್ಭದಲ್ಲಿ ನಡೆಯಲಿದೆ.

ಊಟದಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ಮನೆಯಲ್ಲಿ ತಯಾರಿಸುವಂತಹ ನಾನಾ ತರದ ಉತ್ತರ ಕರ್ನಾಟಕ ವಿವಿಧ ಆಹಾರವನ್ನು ಈ ಸಂದರ್ಭದಲ್ಲಿ ತಯಾರಿಸಲಾಗಿದೆ. ಬಾಂಧವರೆಲ್ಲರೂ ಸೇರಿ ಸಹ ಭೋಜನವನ್ನು ನಡೆಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾಂಪ್ರದಾಯಕ ಉಡುಗೆ ಧರಿಸಿ ಸಮಾಜದ ಎಲ್ಲ ಭಾಂಧವರು ಪಾಲ್ಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯರಾದ ಶ್ರೀ ಶ್ರೀ ವೀರಣ್ಣ ಮಳಗಿ,.ಶ್ರೀ ಚನ್ನಬಸಪ್ಪ ಧಾರವಾಡಶೆಟ್ರು, ಶ್ರೀ ಅಜ್ಜಪ್ಪ ಬೆಂಡಿಗೇರಿ,ಶ್ರೀ ರಾಜು ಶೆಟ್ಟರ,ಶ್ರೀ ಅಶೋಕ ಹೊಸಕೇರಿ,ಶ್ರೀ ಸಿದ್ದು ಅಂಕಲಕೋಟಿ, ವೀರೂಪಾಕ್ಷ ಬಿಸರಳ್ಳಿ,ಸುಗಿರಪ್ಪ ಲಕ್ಷ್ಮೇಶ್ವರ ಇತರರು ಪಾಲ್ಗೊಂಡಿದ್ದರು.

ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ: ಸಿಎಂ ವಿರುದ್ಧ ಜೋಶಿ ಕಿಡಿ

ಬಿಜೆಪಿ ಗ್ರಾಮೀಣ ಅಧ್ಯಕ್ಷರ ರೇಸ್‌ನಲ್ಲಿ ಮೂಲ ಬಿಜೆಪಿ ನಾಯಕರಿಗೆ ಹಿನ್ನೆಡೆ: ವಲಸೆ ಬಂದವರಿಗೆ ಸಿಗುತ್ತಾ ಸ್ಥಾನ?

‘ದೇಶದ ಜನತೆ ಈ ಬಾರಿ ಇಂಥ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.’

About The Author