ಪೇಡಾ ನಗರಿ ಯುವಕನ ಕೈಚಳಕ, 15 ಇಂಚಿನಲ್ಲಿ ಮೂಡಿ ಬಂದ ರಾಮಲಲ್ಲಾ.

Dharwad News: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಇದೇ ಜನವರಿ 22ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದ ಯುವಕನೋರ್ವ ಮಣ್ಣಿನಲ್ಲಿ ಕೇವಲ 15 ಇಂಚಿನ ರಾಮಲಾಲ್ ಮೂರ್ತಿ ಮಾಡಿ ಗಮನಸೆಳೆದಿದ್ದಾನೆ.

ಧಾರವಾಡದ ಕೆಲಗೇರಿಯ ಗಾಯತ್ರಿಪುರಂ ನಿವಾಸಿಯಾಗಿರುವ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಪುತ್ರ ವಿನಾಯಕ ಕೇವಲ 15 ಇಂಚಿನ ಮಣ್ಣಿನ ರಾಮನಮೂರ್ತಿ ನಿರ್ಮಿಸಿದ್ದಾನೆ. ದೇಶದ ಮೂವರು ಪ್ರಖ್ಯಾತ ಶಿಲ್ಪಕಾರರು ರಾಮನ ಮೂರ್ತಿ ಸಿದ್ಧಪಡಿಸಿದ್ದನ್ನು ನೋಡಿ ಅದರಿಂದ ಪ್ರೇರೇಪಿತಗೊಂಡ ವಿನಾಯಕ, 15 ಇಂಚಿನ ರಾಮನ ಮೂರ್ತಿ ಸಿದ್ಧಪಡಿಸಿದ್ದಾನೆ. ವಿಶೇಷ ಎಂದರೆ ರಾಮನ ಮಂತ್ರಾಕ್ಷತೆಯನ್ನು ಈ ವಿಗ್ರಹದಲ್ಲಿ ಹಾಕಿಯೇ ರಾಮನ ಮೂರ್ತಿ ಸಿದ್ಧಪಡಿಸಲಾಗಿದೆ. ಒಟ್ಟಾರೆ ಈ ರಾಮನ ಮೂರ್ತಿ ಇದೀಗ ನೋಡುಗರ ಗಮನಸೆಳೆಯುತ್ತಿದೆ.

ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡಿ ಮತ್ತದೇ ಚಾಳಿ ಹಿಡಿದಿದ್ದೀರಿ: ಸಿಎಂ ವಿರುದ್ಧ ಜೋಶಿ ಕಿಡಿ

ಬಿಜೆಪಿ ಗ್ರಾಮೀಣ ಅಧ್ಯಕ್ಷರ ರೇಸ್‌ನಲ್ಲಿ ಮೂಲ ಬಿಜೆಪಿ ನಾಯಕರಿಗೆ ಹಿನ್ನೆಡೆ: ವಲಸೆ ಬಂದವರಿಗೆ ಸಿಗುತ್ತಾ ಸ್ಥಾನ?

‘ದೇಶದ ಜನತೆ ಈ ಬಾರಿ ಇಂಥ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.’

About The Author