Dharwad News: ಧಾರವಾಡ : ಇಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ, ಸಚಿವ ಹೆಚ್.ಕೆ.ಪಾಟೀಲ್ ಅವರ ಐದು ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಿದ್ದರು.
ಈ ವೇಳೆ ಯು.ಟಿ.ಖಾದರ್ ಮಾತನಾಡಿದ್ದು, ಎಚ್.ಕೆ.ಪಾಟೀಲ ಅತ್ಯಂತ ಹಿರಿಯ ನಾಯಕರು. ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ, ಯಾರಿಗೂ ನೋವುಂಟು ಮಾಡದೇ ಎಲ್ಲರನ್ನೂ ಪ್ರೀತಿಸಿ, ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಎಚ್.ಕೆ.ಪಾಟೀಲ ತೋರಿಸಿಕೊಟ್ಟಿದ್ದಾರೆ. ಎಚ್.ಕೆ.ಪಾಟೀಲ ಆಡಿದ ಮಾತುಗಳು ಮಾಡಿದ ಭಾಷಣಗಳನ್ನು ಪುಸ್ತಕದ ರೂಪದಲ್ಲಿ ಹೊರ ತರಲಾಗಿದೆ. ಇದು ಭವಿಷ್ಯದ ಜನಾಂಗ ಕೊಡುವ ದೊಡ್ಡಮಟ್ಟದ ಕೊಡುಗೆ ಎಂದು ಹೇಳಿದರು.
ರಾಮಮಂದಿರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ನಾನು ಈಗ ಸ್ಪೀಕರ್ ಆಗಿದ್ದೇನೆ. ಸರ್ಕಾರ, ರಾಜಕೀಯದ ಬಗ್ಗೆ ಕೇಳಿದರೆ ಆಗುವುದಿಲ್ಲ. ಸ್ಪೀಕರ್ ಗೆ ಕೇಳುವ ಪ್ರಶ್ನೆ ಕೇಳಿ ಉತ್ತರ ಕೊಡುವೆ ಎಂದು ಹೇಳಿದ್ದಾರೆ.
ಗ್ರ್ಯಾಚ್ಯುಟಿ ವಿಚಾರದ ಬಗ್ಗೆ ಮಾತನಾಡಿದ ಖಾದರ್, ಇದನ್ನು ಸರ್ಕಾರ ತೀರ್ಮಾನ ಮಾಡುತ್ತದೆ. ಸದನಕ್ಕೆ, ಶಾಸಕರಿಗೆ, ಸಚಿವರಿಗೆ ಸಂಬಂಧಿಸಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸುವೆ ಎಂದ ಖಾದರ್ ಹೇಳಿದರು.
ಲೋಕಸಭಾ ಟಿಕೆಟ್ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಚ್ಚರಿ ಹೇಳಿಕೆ..!