‘ರಾಮ ಬಿಜೆಪಿಯವರಿಂದಲೇ ಹುಟ್ಟಿದನೇನೋ ಅನ್ನೋ ರೀತಿ ಆಡ್ತಿದ್ದಾರೆ ಈ ಬಿಜೆಪಿಗರು’

Hubballi Political News: ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದ್ದು, ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿಯವರು ರಾಮನನ್ನು ತಾವೇ ಹುಟ್ಟಿಸಿದಂತೆ ಮಾತನಾಡುತ್ತಿದ್ದಾರೆ. ನಮಗೆ ಎಲ್ಲ ದೇವರು ಇವೆ. ಎಲ್ಲ ಜಾತಿಯ ದೇವರುಗಳನ್ನ ಗೌರವದಿಂದ ಕಾಣುತ್ತೇವೆ. ಶ್ರೀರಾಮನನ್ನ ಸಹ ಗೌರವ,‌ ಪ್ರೀತಿಯಿಂದ ಗೌರವಿಸುತ್ತೇವೆ. ಭಕ್ತಿಯಿಂದ ಪೂಜೆ ಮಾಡುತ್ತೇವೆ. ಹಿಂದುಗಳಲ್ಲಿ ಒಂದು ಸ್ಥಾನವಿದೆ. ಭಾರತೀಯ ಜನತಾ ಪಕ್ಷದವರು ರಾಮನನ್ನೇ ಹುಟ್ಟಿಸಿದವಂತೆ ಮಾತಾಡ್ತಾರೆ. ರಾಮ ಬಿಜೆಪಿಯಿಂದ ಹುಟ್ಟಿದ್ದಾನೇ ಏನೋ ಅನ್ನೋ ತರಾ ವರ್ತನೆ ಮಾಡ್ತಾ ಇದ್ದಾರೆ. ಇದರಿಂದ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆಗೆ ತಯಾರಿ ಕುರಿತು ಪ್ರತಿಕ್ರಿಯಿಸಿದ ತಿಮ್ಮಾಪುರ, ಈಗಾಗಲೇ ನಾವು ಸಹ ತಯಾರಿ ನಡೆದ್ದೇವೆ. ಕಾಂಗ್ರೆಸ್ ಬಿಜೆಪಿಯಲ್ಲಿ ಸಹ ಬಿರುಸಿನಿಂದ ಚಟುವಟಿಕೆ ಆರಂಭ ಆಗಿಲ್ಲ. ಪಕ್ಷದ ಹಿರಿಯರು ಕೊಟ್ಟ ಸಲಹೆ ಪಾಲುಸುತ್ತೇವೆ. ಸಚಿವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಸಹಜವಾಗಿಯೇ ಅವರು ಜನರ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಆದ್ದರಿಂದ ಪಕ್ಷದ ಹಿರಿಯರು ಹೆಚ್ಚಿನ ಜವಾಬ್ದಾರಿ ಕೊಡ್ತಾರೆ. ಇದರಲ್ಲಿ ಏನು ಹೇಳಿಕೊಳ್ಳುವ ವಿಶೇಷ ಇಲ್ಲ. ಹೆಚ್ಚು ಸ್ಥಾನ ಪಡೆಯುವುದು ನಮ್ಮ ಜವಾಬ್ದಾರಿ. ಭಾರತ ಜೋಡೋ ಯಾತ್ರೆಯಿಂದ ಬಿಜೆಪಿಗೆ ತಡೆದುಕೊಳ್ಳಲು ಆಗ್ತಾ ಇಲ್ಲ ಎಂದು ತಿಮ್ಮಾಪುರ ಹೇಳಿದ್ದಾರೆ.

ಬಿಜೆಪಿಯವರು ಯಾವಾಗಲೂ ಹಾಗೇ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುಸುವುದು. ಇನ್ನೊಂದು ಪಕ್ಷವನ್ನು ಹತ್ತಿಕ್ಕುವ ಹುನ್ನಾರ ಮಾಡ್ತಾ ಇದೆ. ಇಡಿ ಐಟಿ, ಸಿಬಿಐ ಹೆದರಿಸುವುದು. ಸರ್ಕಾರಿ ಕಚೇರಿ ದುರುಪಯೋಗ. ತುರ್ತು ಪರಿಸ್ಥಿತಿಕ್ಕಿಂತ ಕೆಟ್ಟ ಪರಿಸ್ಥಿತಿ ನಿರ್ಮಾಣ. ಹೆದರಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಚುನಾವಣೆ ನಡೆಸಲಾರದಂತೆ ಹೆದರಿಕೆ ಬೆದರಿಕೆ ಹಾಕುವುದು. ಪ್ರಜಾಪ್ರಭುತ್ವ ಹಾಳಾಗುವಂತೆ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ತಿಮ್ಮಾಪುರ ಹರಿಹಾಯ್ದಿದ್ದಾರೆ.

ಸಣ್ಣ ಪುಟ್ಟ ಪ್ರಕರಣಳಿಗೆ ಸಹ ಕೇಸ್ ಹಾಕುವುದು. ಹೆದರಿಕೆ ಬೆದರಿಕೆಯಿಂದ ನಿಯಂತ್ರಣ ಮಾಡುವುದು. ನೋಡು ನೀನು ಕಾಂಗ್ರೆಸ್ ಜೊತೆಗೆ ಇದ್ದರೆ ಇಡಿ ಐಟಿ ದಾಳಿ ಮಾಡಿಸುತ್ತೇವೆ ಅಂತಾ ಬೆದರಿಕೆ ಹಾಕುವುದು.  ಯಾರು ನೆಮ್ಮದಿಯಿಂದ ಇರಲು ಬಿಡತಾ ಇಲ್ಲ. ಭಯದ ವಾತಾವರಣ ನಿರ್ಮಾಣ ಮಾಡಿ ಮತ ಕೇಳುವ ಹುನ್ನಾರ. ಭಾರತ ಜೋಡೋ ಯಾತ್ರೆಯಿಂದ ಏನೋ ಆಗಿ ಬಿಡುತ್ತೇ ಅನ್ನುವ ಭಯ ಬಿಜೆಪಿಗೆ ಇದೆ. ನಾಯಕ ರಾಹುಲ್ ಗಾಂಧಿ ಅವರು ಯಾವುದೇ ಲಾಭ, ಆಶೆ ಆಕಾಂಕ್ಷೆ ಇಲ್ಲದೇ ಯಾತ್ರೆ ನಡೆಸತಾ ಇದ್ದಾರೆ. ಯಾವುದೇ ದುರುದ್ದೇಶ ಇಲ್ಲದೇ ಪಕ್ಷ ಕಟ್ಟತಾ ಇದ್ದಾರೆ. ಇದರಿಂದ ಭ್ರಮನಿರಸನಗೊಂಡು ಏನೇನು ಬಿಜೆಪಿ ಅವರು ಮಾತಾಡ್ತಾ ಇದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

ಹುಬ್ಬಳ್ಳಿಯಲ್ಲಿ ಕೋಟ್ಯಾಧೀಶನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ.. ಮೇರಿ ಮೇಲೆ ಆರೋಪ..!

ಲೋಕಸಭಾ ಟಿಕೆಟ್‌ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅಚ್ಚರಿ ಹೇಳಿಕೆ..!

About The Author