Tuesday, October 22, 2024

Latest Posts

ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಸೌತ್ ಆಫ್ರಿಕಾ U19 ತಂಡದ ನಾಯಕ ವಜಾ

- Advertisement -

Sports News: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಕಳೆದ ವರ್ಷವೇ ಶುರುವಾಗಿದೆ. ಆದರೆ ಸಂಪೂರ್ಣವಾಗಿ ಆ ಯುದ್ಧಕ್ಕೆ ಬ್ರೇಕ್ ಬಿದ್ದಿಲ್ಲ. ಈ ನಡುವೆ ಸೌತ್ ಆಫ್ರಿಕಾ ಕ್ರಿಕೇಟ್ ಆಟಗಾರನೊಬ್ಬ ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಅವನನ್ನು ಕ್ರಿಕೇಟ್ ನಾಯಕತ್ವದಿಂದ ಹೊರಗಿಡಲಾಗಿದೆ.

ಡೇವಿಡ್ ಟೀಗರ್ ಎಂಬ ಆಟಗಾರ,  ಸೌತ್ ಆಫ್ರಿಕಾ U19 ತಂಡದ ನಾಯಕನಾಗಿದ್ದ. ಆದರೆ ಇಸ್ರೇಲ್ ಸೈನಿಕರನ್ನು ಈತ ಹೊಗಳಿದ್ದ ಪರಿಣಾಮವಾಗಿ, ಈತನನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಸದ್ಯದಲ್ಲೇ ಹೊಸ ನಾಯಕನನ್ನು ನೇಮಿಸುವುದಾಗಿ, ಕ್ರಿಕೇಟ್ ಮಂಡಳಿ ತಿಳಿಸಿದೆ.

ಕೆಲ ದಿನಗಳ ಹಿಂದೆ ಡೇವಿಡ್ ಯಹೂದಿ ಅಚೀವರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಡೇವಿಡ್‌ಗೂ ಪ್ರಶಸ್ತಿ ಲಭಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಡೇವಿಡ್. ನಾನು ಉದಯೋನ್ಮುಖ ಆಟಗಾರನಷ್ಟೇ, ಆದರೆ ನಿಜವಾದ ತಾರೆಗಳೆಂದರೆ, ಇಸ್ರೇಲ್ ಸೈನಿಕರು. ನಾನು ಈ ಪ್ರಶಸ್ತಿಯನ್ನು ಇಸ್ರೇಲ್ ಸೈನಿಕರಿಗಾಗಿ ಅರ್ಪಿಸುತ್ತೇನೆ ಎಂದು ಹೇಳಿದ್ದರು.

ಹೀಗೆ ಹೇಳಿಕೆ ಕೊಟ್ಟಿದ್ದಕ್ಕೆ ಡೇವಿಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಏಕೆಂದರೆ, ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಗಾಜಾದ ಜನ ಪ್ರಾಣತೆತ್ತಿದ್ದರು. ಎಷ್ಟೋ ಅಮಾಾಯಕರು ಕಷ್ಟ ಅನುಭವಿಸಿದ್ದರು. ಈ ಕಾರಣಕ್ಕೆ ಹಲವರು ಇಸ್ರೇಲ್ ಸೇನೆಯನ್ನು ದ್ವೇಷಿಸುತ್ತಿದ್ದರು. ಡೇವಿಡ್ ಈ ರೀತಿ ಹೇಳಿಕೆ ಕೊಟ್ಟಿದ್ದು, ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್‌ಗೆ ಸೌತ್ ಆಫ್ರಿಕಾ ಕ್ರಿಕೇಟ್ ಮಂಡಳಿಗೆ ದೂರ ಬಂದಿತ್ತು. ಈ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ, ಕ್ರಿಕೇಟ್ ಮಂಡಳಿ, ಡೇವಿಡ್‌ನನ್ನು ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿದೆ.

ಆಫ್ರಿಕಾ ಕ್ರಿಕೇಟಿಗನಿಗೂ ಇಷ್ಟವಾಗಿದೆಯಂತೆ ಈ ರಾಮಭಜನೆ..

ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

- Advertisement -

Latest Posts

Don't Miss