Wednesday, April 16, 2025

Latest Posts

‘ಮಾಜಿ ಪಿಎಂ, ಹಾಲಿ ಪಿಎಂ ಕೊಟ್ಟ ಅನುದಾನದ ಲೆಕ್ಕವನ್ನು ಶ್ವೇತ ಪತ್ರದ ಮೂಲಕ ಬಿಡುಗಡೆ ಮಾಡಿ’

- Advertisement -

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿದ್ದು,  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ‌ ಮಾಡ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಜನರಲ್ಲಿ ತಪ್ಪು ಕಲ್ಪನೆ ಬರೋ ತರಹ ಸುಳ್ಳು ಅರೋಪ ಮಾಡ್ತಿದೆ. ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಎಂದು ಹೇಳುತ್ತಿದ್ದಾರೆ. ಅನುದಾನವೂ ಕಡಿಮೆ ಬರ್ತಿದೆ ಎಂದು ಹೇಳುತ್ತಿದ್ದಾರೆ. 2004 ರಿಂದ 2014 ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಮನಮೋಹನ ಸಿಂಗ್ ಪ್ರಧಾನಿ ಇದ್ರು. ಅವಾಗ ಕರ್ನಾಟಕಕ್ಕೆ ಬಂದ ಅನುದಾನ ಎಷ್ಟು, ಪಾಲೆಷ್ಟು ಎಂದು ತಿಳಿಸಬೇಕು. ನರೇಂದ್ರ ಮೋದಿ ಅವರು ಕೊಟ್ಟ ಅನುದಾನ ಎಷ್ಟು ಅನ್ನೋದನ್ನ ಶ್ವೇತ ಪತ್ರದ ಮೂಲಕ ಬಿಡುಗಡೆ ಮಾಡಬೇಕು. ಈ ಸವಾಲ್ ಮುಖ್ಯಮಂತ್ರಿಗಳು ಸ್ವೀಕರಿಸ್ತಾರೆ ಅನ್ನೋ ಭಾವನೆ ಇದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಮೋದಿ ಅನುದಾನ ಕಡಿಮೆ ಕೊಟ್ಟಿದ್ರೆ,ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುತ್ತೇವೆ. ನಾವು 28 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಲ್ಲ. ನಿಮಗೆ ಅವಿರೋಧ ಆಯ್ಕೆಗೆ ಅವಕಾಶ ಕೊಡ್ತೀವಿ. ನೀವು ಇದೇ ಸವಾಲನ್ನು ಸ್ವೀಕರಿಸಿ, ಸುಳ್ಳೇ ಮನೆ ದೇವರು ಎಂದು ನೀವ ಅಭ್ಯರ್ಥಿ ಹಾಕಬಾರದು. ಕ್ಷಮಾಪಣೆ ಕೇಳಿ ಅಭ್ಯರ್ಥಿ ನಿಲ್ಲಸಲ್ಲ ಎಂದು ಘೋಷಣೆ ಮಾಡಿ ಎಂದು ಸಿ.ಟಿ.ರವಿ ಸವಾಲ್ ಹಾಕಿದ್ದಾರೆ.

ಯಪಿಎ 10 ವರ್ಷದಲ್ಲಿ 81795 ಕೋಟಿ ರೂಪಾಯಿ ಹಣ ನೀಡಿದೆ. ಮೋದಿ ಅವರು ಕೊಟ್ಟಿರೋದು 2,80,130 ಕೋಟಿ. ಶೇಕಡಾ 242 ರಷ್ಟು ಮೋದಿ ಸರ್ಕಾರ ಹೆಚ್ಚು ಕೊಟ್ಟಿದೆ. ಕಾಂಗ್ರೆಸ್ ಸರ್ಕಾರ 10 ವರ್ಷದಲ್ಲಿ 60,779ಕೋಟಿ. ಬಿಜೆಪಿ ಕೊಟ್ಟಿರೋದು 2.08,832 ಕೋಟಿ. ಮಕ್ಕಳಿಗೂ ಗೊತ್ತು ಯಾರು ಹೆಚ್ಚು ಕೊಟ್ಟಿದಾರೆ ಅಂತಾ‌. ಆದ್ರೆ ಆರ್ಥಿಕ ತಜ್ಞ ಸಿದ್ದರಾಮಯ್ಯ ಎಲ್ಲ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ. ಜನ ಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತೆ. ಮುಂಚೆ ಜನ ಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ.

ಕೇಂದ್ರದಿಂದ ವಂಚನೆ ಆಗ್ತಿರೋದು ಸುಳ್ಳು. ಇದಕ್ಕೆ ಕಾಂಗ್ರೆಸ್ ಶ್ವೇತ ಪತ್ರ ಹೊರಡಿಸಲಿ. ಕೆಂದ್ರ ಸರ್ಕಾರ ಯಾವತ್ತೂ ರಾಜಕಾರಣ ಮಾಡಲ್ಲ. ಒಂದು ಸೀಟ್ ಇಲ್ಲದೇ ಕೇರಳಕ್ಕೂ ಸರ್ಕಾರ ಹಣ ಕೊಟ್ಟಿದೆ. ಕಾಂಗ್ರೆಸ್ ಗೆ ರೈತರು,ದಲಿತರ ಮೇಲೆ‌ ಪ್ರೀತಿ‌ ಇಲ್ಲ. ದಲಿತರ ಹಣ ಡೈವರ್ಟ್ ಮಾಡಿದ್ರು,ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ರು ಎಂದು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದಾರೆ.

ಇದೆಲ್ಲ ಬರೀ ಲೋಕಸಭೆ ಚುನಾವಣೆಗಾಗಿ ಮಾತ್ರ: ರಾಮಮಂದಿರ ಉದ್ಘಾಟನೆ ಬಗ್ಗೆ ಲಾಡ್ ಮಾತು

ದೇವೇಗೌಡರರು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ನೂರು ರೂ.ಗಳನ್ನಾದರೂ ಕೊಟ್ಟಿದ್ದರ?: ಸಿಎಂ ಪ್ರಶ್ನೆ

ನಾನು ಈಗ ಸ್ಪೀಕರ್. ರಾಜಕೀಯದ ಬಗ್ಗೆ ಕೇಳು ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ: ಯು.ಟಿ.ಖಾದರ್

- Advertisement -

Latest Posts

Don't Miss