Friday, December 27, 2024

Latest Posts

‘ಮಂಜೂರಾಗಿದ್ದ ಅನುದಾನ ವಾಪಸ್ ಪಡೆಯುವಂತೆ ಪತ್ರ ಬರೆದ ಸರ್ಕಾರದ್ದು ಯಾವ ಸೀಮೆ ರಾಜಕೀಯ..?’

- Advertisement -

Political News: ಬಿ.ವೈ.ರಾಘವೇಂದ್ರ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಿದ್ದು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಂದಿದ್ದು, ವಿಮಾನ ನಿಲ್ದಾಣ ಮಾಡಿದ್ದು ಯಾರು? ಎಂದು ಜಿಲ್ಲೆಯ ಜನತೆಯನ್ನೇ ಕೇಳಿ, ಅವರೇ ಉತ್ತರ ನೀಡ್ತಾರೆ ಎಂದು ರಾಗವೇಂದ್ರ ಹೇಳಿದ್ದಾರೆ.

ಕಳೆದ 15 ವರ್ಷಗಳಲ್ಲಿ ಜಿಲ್ಲೆಗೆ ಬಿಜೆಪಿ ಏನು ಮಾಡಿದೆ ಎಂದು ಕೇಳುವ ನೀವು, ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಮೊದಲು ಲೆಕ್ಕ ಕೊಡಿ, ಆಮೇಲೆ ಮಾತನಾಡಿ. ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಪದೇ ಪದೇ ಅಡ್ಡಗಾಲು ಹಾಕುತ್ತಲೇ ಇದ್ದಾರೆ. ಅದರಲ್ಲೂ ಜಿಲ್ಲೆಯ ಹತ್ತು ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಮಂಜೂರಾಗಿದ್ದ ಅನುದಾನ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಸರ್ಕಾರದ್ದು ಇದ್ಯಾವ ಸೀಮೆ ರಾಜಕೀಯ? ಎಂದು ರಾಘವೇಂದ್ರ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಯೋಜನೆಗಳಿಗೆ ದುಡ್ಡು ಕೊಡೋದಿರಲಿ, ಸದ್ಯ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಧಮ್ಕಿ ಹಾಕೋದು ನಿಲ್ಲಿಸಿದರೆ ಸಾಕು ಎಂದು ರಾಘವೇಂದ್ರ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.

ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

ಮೋದಿ ಕರೆಗೆ ಓಗೊಟ್ಟು ದೇವಸ್ಥಾನ ಕ್ಲೀನ್ ಮಾಡಿದ ನಟ ಜಗ್ಗೇಶ್..

‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’

- Advertisement -

Latest Posts

Don't Miss