ಅಯೋಧ್ಯಾ ರಾಮನ ದರ್ಶನ ಪಡೆಯಲು ಬೈಕ್ ಏರಿ ಹೊರಟ ಹುಬ್ಬಳ್ಳಿ-ಧಾರವಾಡ ಯುವಕರು

Dharwad News: ಧಾರವಾಡ : ರಾಮನ ದರ್ಶನ ಪಡೆಯಲು ಧಾರವಾಡದ ಯುವಕರು, ತಮ್ಮ ಬೈಕ್ ಏರಿ, ಅಯೋಧ್ಯೆಗೆ ಹೊರಟಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಧಾರವಾಡದಿಂದ ಪ್ರಯಾಣ ಬೆಳೆಸಿರುವ ನಾಲ್ವರು ಯುವಕರು, 2 ಸಾವಿರ ಕೀಲೋ ಮೀಟರ್ ಬೈಕ್‌ನಲ್ಲಿ ಚಲಿಸಿ, ರಾಮ ದರ್ಶನ ಮಾಡಲಿದ್ದಾರೆ.

ಹುಬ್ಬಳ್ಳಿ, ಧಾರವಾಡ ಮೂಲದ,  ದರ್ಶನ್ ಪವಾರ, ದರ್ಶನ್ ಭಾವೆ,ಬಾಲರಾಜ ದೊಡಮನಿ, ಲಕ್ಷ್ಮಣ ಹಂಚಿನಮನಿ ಎಂಬುವವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಒಂದು ರಾಯಲ್ ಎನ್‌ಫೀಲ್ಡ್ , ಮತ್ತೊಂದು ಬೆನಾಲಿ ಬೈಕ್ ಮುಖಾಂತರ ಈ ಯುವಕರು ಅಯೋಧ್ಯೆಗೆ ಹೊರಟಿದ್ದು, ನಾಲ್ಕು ದಿನಗಳಲ್ಲಿ ಅಯೋಧ್ಯೆ ತಲುಪಲಿದ್ದಾರೆ.

ಜೈ ಶ್ರೀರಾಮ ಎಂದು ಘೋಷಣೆ ಹಾಕುತ್ತ, ರಾಮನ ದರ್ಶನಕ್ಕಾಗಿ ಹೊರಟ ಯುವಕರಿಗೆ ಸಾರ್ವಜನಿಕರು, ಶುಭಾಶಯ ಕೋರಿ, ಬೀಳ್ಕೊಟ್ಟಿದ್ದಾರೆ.

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಕೂಲ್ ಧೋನಿಗೆ ಆಹ್ವಾನ

‘ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ’

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

About The Author