Hassan News: ಹಾಸನ : ಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನಲೆ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಮಾಜಿ ಸಚಿವ ಬಿ.ಶಿವರಾಂ ಸುದ್ದಿಗೋಷ್ಠಿ ನಡೆಸಿದ್ದು, ಪರೋಕ್ಷವಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಟಾರ್ಗೇಟ್ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ ಬರುತ್ತಿದೆ. ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು, ಸಿಎಂ ಸಿದ್ಧರಾಮಯ್ಯ ಸೇರಿ ಎಲ್ಲರದ್ದು ಒಕ್ಕೊರಲ ಅಭಿಪ್ರಾಯ 28 ಕ್ಕೆ 28 ಗೆಲ್ಲಬೇಕು. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೆಲವು ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕು. ಕೆ.ಎಂ.ಶಿವಲಿಂಗೇಗೌಡ ಹಾಸನ ಜಿಲ್ಲೆಯ ಏಕೈಕ ಶಾಸಕರು. ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ತಾರೆ ಎನ್ನುವ ಅಭಿಪ್ರಾಯ ಇದೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಆರು ಜನ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದೇವೆ. ಜಾತ್ಯಾತೀತ ನಿಲುವು ತೆಗೆದುಕೊಳ್ಳದೆ ಸೋತಿದ್ದೇವೆ. ಲಿಂಗಾಯಿತ ಸಮುದಾಯವನ್ನು ಕಡೆಗಣಿಸಿದ್ದೇವೆ. ಒಬ್ಬ ಲಿಂಗಾಯಿತರಿಗೂ ಸೀಟ್ ಕೊಡಲಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮಯ್ಯ ಅವರಿಗೆ ಕೊಟ್ಟರು. ಅದಕ್ಕೆ ಅಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದ್ದಾರೆ. ಅರಸೀಕೆರೆಯಲ್ಲಿ ಲಿಂಗಾಯಿತರಿಗೆ ಸೀಟ್ ಕೊಡಬೇಕಿತ್ತು. ನಾನು ಲಿಂಗಾಯುತ ಸಮುದಾಯದ ಶಶಿಕುಮಾರ್ ಅವರಿಗೆ ಸ್ಥಾನ ಬಿಟ್ಟುಕೊಟ್ಟು ಬಂದಿದ್ದೆ. ಅರಸೀಕೆರೆಯಲ್ಲಿಯೂ ಒಕ್ಕಲಿಗರಿಗೆ ಸೀಟ್ ಕೊಟ್ಟಿದ್ದರಿಂದ ಅವರೊಬ್ಬರು ಗೆದ್ದರು ಆರು ಜನ ಸೋತರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯಿತ ಸಮುದಾಯಕ್ಕೆ ನೀಡಬೇಕು. ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಗೆ ಟಿಕೆಟ್ ಬಿಟ್ಟುಕೊಟ್ಟಂತಹ ಶಶಿಧರ್ ಅವರಿಗೆ ನಿಗಮ ಮಂಡಳಿ ಸ್ಥಾನ ಕೊಡಲೇಬೇಕು. ಅವರಿಗೆ ಮಾತು ಕೊಟ್ಟಿದ್ದಾರೆ, ಮಾತು ಕೊಟ್ಟಂತೆ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಎಂದಿದ್ದಾರೆ ಎಂದು ಬಿ.ಶಿವರಾಂ ಹೇಳಿದ್ದಾರೆ.
ಲಿಂಗಾಯುತ ವರ್ಗದ ಶಶಿಧರ್ ಅವರಿಗೆ ನಿಗಮ ಮಂಡಳಿ ಕೊಟ್ಟರೆ ಲೋಕಸಭಾ ಚುನಾವಣೆ ಗೆಲ್ಲಬಹುದು. ಇಲ್ಲವಾದರೆ ಅಸೆಂಬ್ಲಿಯಲ್ಲಿ ಆದಂತೆ ಆಗುತ್ತದೆ. ಇಡೀ ರಾಜ್ಯದಲ್ಲಿ 136 ಸ್ಥಾನ ಗೆಲ್ಲಲಾಯಿತು. ಆದರೆ ಹಾಸನದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಬೇಕಾಯಿತು. ಮುಂದಿನ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸರಿಯಾದ ನಿರ್ಧಾರ ಮಾಡಬೇಕು. ಜಿಲ್ಲೆಗೆ ವೀಕ್ಷಕರು, ಉಸ್ತುವಾರಿ ಇದ್ದಾರೆ. ಆದರೆ ಅವರು ಇದುವರೆಗೂ ಎಲ್ಲಿಯೂ ಪ್ರವಾಸ ಮಾಡಿಲ್ಲ. ಜನಾಭಿಪ್ರಾಯ ಕೇಳದೆ ಸ್ವಹಿತಾಸಕ್ತಿಯಿಂದ ಟಿಕೆಟ್ ಅನೌನ್ಸ್ ಮಾಡಬಾರದು. ಹಾಗೆ ಮಾಡಿದರೆ ಚುನಾವಣೆ ಕಷ್ಟವಾಗುತ್ತದೆ ಎಂದು ಬಿ.ಶಿವರಾಂ ಹೇಳಿದ್ದಾರೆ.
ಜಿಲ್ಲೆಯ ಎಲ್ಲಾ ಹಿರಿಯ, ನಿಷ್ಠಾವಂತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಬೇಕು. ಕೆ.ಎಂ.ಶಿವಲಿಂಗೇಗೌಡರು ಅರಸೀಕೆರೆ ಬಿಟ್ಟು ಯಾಕ ಕ್ಷೇತ್ರಕ್ಕೂ ಬರುತ್ತಿಲ್ಲ. ಯಾವುದೇ ಕಾರ್ಯಕರ್ತರು ಮುಖಂಡರನ್ನು ಮಾತನಾಡಿಸುತ್ತಿಲ್ಲ. ಅರಸೀಕೆಯಲ್ಲಿ ಮಾತ್ರ ಇರ್ತಾರೆ. ಅವರಿಗೆ ಬೇರೆ ಯಾವುದೇ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಷ್ಟೇ ಬರ್ತಾರೆ, ಹೋಗ್ತಾರೆ. ಅವರು ಜಿಲ್ಲೆಗೆ ಹೊಸಬರು ಅವರಿಗೆ ಜಿಲ್ಲೆಯ ಮುಖಂಡರ ಪರಿಚಯವಿಲ್ಲ.
ನೀತಿಗೆಟ್ಟವರು ಟಿಕೆಟ್‌ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಮೂಲೆ ಗುಂಪಾಗುತ್ತಿದ್ದಾರೆ. ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿದವರು ಅಧಿಕಾರದಿಂದ ವಂಚಿರಾಗುತ್ತಿದ್ದಾರೆ. ಹಾಗಾಗಿ ಲಿಂಗಾಯುತ ಸಮುದಾಯದ ಶಶಿಧರ್ ಅವರಿಗೆ ನಿಗಮ ಮಂಡಳಿ ಕೊಡಲಿ. ಕೆ.ಎಂ.ಶಿವಲಿಂಗೇಗೌಡಿಗೆ ಲೋಕಸಭಾ ಟಿಕೆಟ್ ನೀಡಲಿ. ಎಲ್ಲರೂ ಒಗ್ಗಟ್ಟಾಗಿ ನಿಂತು ಅವರನ್ನು ಗೆಲ್ಲಿಸುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಅವರನ್ನು ಮಂತ್ರಿ ಮಾಡಲಿ ಎಂದು ಬಿ.ಶಿವರಾಂ ಹೇಳಿದ್ದಾರೆ.
ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’

