Hubballi News: ಹುಬ್ಬಳ್ಳಿ: ನಗರದ ಹಳೇ ದುರ್ಗದ ಬೈಲ್ ಸರ್ಕಲ್, ವಿದ್ಯಾನಗರ, ಮರಾಠ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರಸೇವಕರು ಹಾಕಿದ ಬ್ಯಾನರ್ ಅನ್ನು ರಾತ್ರೋ ರಾತ್ರಿ ತೆರವು ವಿಚಾರಕ್ಕೇ ಇದೀಗ ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬ್ಯಾನರ್ ನಲ್ಲಿ ಮಾಜಿ ಶಾಸಕ ಅಶೋಕ ಕಾಟವೇ ಅಯೋಧ್ಯೆಯಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾದ ಕೆಲವೊಂದಿಷ್ಟು ಫೋಟೋಗಳ ಬ್ಯಾನರ್ ಮಾಡಿ ನಗರದ ಪ್ರಮುಖ ಪದೇಶಗಳಲ್ಲಿ ರಾತ್ರೋ ರಾತ್ರಿ ಹಾಕಲಾಗಿತ್ತು. ಈ ಬ್ಯಾನರ್ ನಲ್ಲಿ ಕರ ಸೇವಕರು ಕೂಡಾ ಮಸೀದಿ ಮೇಲೆ ಹತ್ತಿ ಮಸೀದಿಯನ್ನು ದ್ವಂಸ ಮಾಡುವ ಫೋಟೋ ಕೂಡಾ ಹಾಕಲಾಗಿತ್ತು.
ಹೀಗಾಗಿ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಪ್ರಚೋದಾತ್ಮಕವಾಗಿ ಹಾಕಲಾಗಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಬೆಳ್ಳಿಗ್ಗೆಯಿಂದ ನಗರದಲ್ಲಿ ಬಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಯನ್ನು ಕೂಡಾ ಮಾಡಲಾಗಿದ್ದು ಕಮೀಷನರ್ ರೇಣುಕಾ ಸುಕುಮಾರ ಖುದ್ದು ಫೀಲ್ಡ್ ಗೆ ಇಳಿದಿದ್ದಾರೆ. ಇನ್ನು ಹಳೇ ಹುಬ್ಬಳ್ಳಿಗೆ ಭೇಟಿ ನೀಡಿದ ಪ್ರಮೋದ ಮುತಾಲಿಕ್ ಬ್ಯಾನರ್ ಮರಳಿ ಹಾಕದಿದ್ದರೆ, ಹಿಂದೂ ಸಂಘಟನೆಗಳು ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
‘ಜ.22ಕ್ಕೆ ವಿಶೇಷ ವಿಮಾನದಲ್ಲಿ ನಾನು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ಹೋಗಲಿದ್ದೇನೆ.’
‘ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು’
‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’