Hubballi News: ಹುಬ್ಬಳ್ಳಿ: ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ರಾಜ್ಯದಲ್ಲಿ ನಿರ್ಭಯವಾಗಿ ಭ್ರಷ್ಟಾಚಾರ ಬಯಲು ಗೊಳಿಸುತ್ತಿದ್ದು, ಅಂಥವರಿಗೆ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಹೇಮಂತ ನಾಗರಾಜ್ ತಿಳಿಸಿದರು.
ಹುಬ್ಬಳ್ಳಿ ಪ್ರವಾಸ ಮಂದಿರ ಸುದ್ದಿಗೋಷ್ಠಿಯಲ್ಲಿ ರವಿವಾರ ಮಾತನಾಡಿ, ಆರ್ಟಿಐ ಕಾರ್ಯಕರ್ತರು ತಮ್ಮ ಪ್ರಾಣದ ಹಂಗು ತೊರೆದು ಅನ್ಯಾಯ ಬಯಲಿಗೆಳೆಯುತ್ತಿದ್ದಾರೆ. ಸಾಕಷ್ಟು ಕಾರ್ಯಕರ್ತರ ಮೇಲೆ ದಾಳಿ ನಡೆದು, ಅನೇಕರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರಿಗೆ ಪ್ರತಿಕ್ಷಣವೂ ಪ್ರಾಣಾಪಾಯದ ಭೀತಿ ಇರುವ ಹಿನ್ನೆಲೆಯಲ್ಲಿ ಅಂಥವರನ್ನು ಸಂಘಟಿಸುವ ಸದುದ್ದೇಶದಿಂದ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರಿಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳು ಕಾರ್ಯಕರ್ತರನ್ನು ಬೆದರಿಸುವ, ಆಮಿಷಕ್ಕೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ. ಹುನ್ನಾರ ನಡೆಸಿ, ಅಂತಹ ಕಾರ್ಯಕರ್ತರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಅಣಕಿಸುವ ಇಂತಹ ಭ್ರಷ್ಟರು ಹಾಗೂ ಭ್ರಷ್ಟ ವ್ಯವಸ್ಥೆ ವಿರುದ್ಧ ಕಾನೂನು ಸಮರ ಸಾರುವ ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ರಾಜ್ಯಾದ್ಯಂತ ಇರುವ ಆರ್ಟಿಐ ಕಾರ್ಯಕರ್ತರನ್ನು ರಕ್ಷಿಸುವುದು ವೇದಿಕೆ ಮುಖ್ಯ ಉದ್ದೇಶ. ರಾಜ್ಯವ್ಯಾಪಿಯಾಗಿ ತನ್ನ ಕಾರ್ಯವ್ಯಾಪ್ತಿ ಹೊಂದಿರುತ್ತದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ವೇದಿಕೆ ಅಸ್ತಿತ್ವಕ್ಕೆ ತಂದಿದ್ದು, ಭ್ರಷ್ಟರ ವಿರುದ್ಧ ಸಮರ ಸಾರುವ ಕಾರ್ಯಕರ್ತರ ಧ್ವನಿಯಾಗಿ ವೇದಿಕೆ ನಿಲ್ಲಲಿದೆ ಎಂದರು.
ಈಗಾಗಲೇ ರಾಜ್ಯದ 4 ಜಿಲ್ಲೆಗಳಿಗೆ ವೇದಿಕೆಯ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಧಾರವಾಡ ಜಿಲ್ಲಾಧ್ಯಕ್ಷರಾಗಿ Y N ಪಾಟೀಲ ರನ್ನು ನೇಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜ್ ಸಮಿತಿ ಪ್ರದಾನ ಕಾರ್ಯದರ್ಶಿ ಅಲ್ಬರ್ಟ್. , ಜಿಲ್ಲಾಧ್ಯಕ್ಷ YN ಪಾಟೀಲ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪರಶುರಾಮ ಬಗಲಿ, ಜಿಲ್ಲಾ ಮಾದ್ಯಮ ಸಲಹೆಗಾರ ಸಂಗಮೇಶ ಸತ್ತಿಗೇರಿ,ಶಿವರಾಜ್ ಪಾಟೀಲ್, ಮಂಜುನಾಥ್ ಬೂದಿಹಾಳ, ಸೇರಿದಂತೆ ಧಾರವಾಡ ಜಿಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.
ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆಗೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ: ಇಂಡುವಾಳು ಸಚ್ಚಿದಾನಂದ
ಅಯೋಧ್ಯಾ ಕಾರ್ಯಕ್ರಮದ ಹಿನ್ನೆಲೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಸಿಎಂ ಸಿದ್ದರಾಮಯ್ಯ




