ರಾಮಮಂದಿರ ಉದ್ಘಾಟನೆ ದಿನ ಸರ್ಕಾರಿ ರಜೆ ಇಲ್ಲ: ಸಿಎಂ ಸಿದ್ದರಾಮಯ್ಯ

Tumakuru News: ತುಮಕೂರಿನಲ್ಲಿಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಳೆ ಸರ್ಕಾರಿ ರಜೆ ಘೋಷಣೆ ಇಲ್ಲವೆಂದು ಹೇಳಿದ್ದಾರೆ.  ತುಮಕೂರಿನಲ್ಲಿ ಕರ್ನಾಟಕ ರತ್ನ ಶತಾಯುಷಿ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ “ಸ್ಮೃತಿ ವನ”ವನ್ನು ಉದ್ಘಾಟಿಸಿ, ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಿಎಂ ಸಿದ್ದರಾಮಯ್ಯ, ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ವೇಳೆ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಇದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಕೊಡಲಾಗುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ನಿರ್ಧಾರಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರು ತಮ್ಮ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಿದ್ದಾರೆ. ಅವರನ್ನು ನೋಡಿ ಕಲಿಯಿರಿ ಎಂದ ಅಸಮಾಧಾನ ಹೊರಹಾಕಿದ್ದಾರೆ.

ಹಿಂದೂ ವಿರೋಧಿ ನೀತಿಯೇ ಸಿದ್ದರಾಮಯ್ಯನವರ ಆಡಳಿತದ ಧ್ಯೇಯ. ಹಿಮಾಚಲ ಕಾಂಗ್ರೆಸ್ ಸರ್ಕಾರ ನಾಳೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಿದೆ, ಸಿದ್ದರಾಮಯ್ಯನವರು ಯಾರನ್ನು ಓಲೈಸಲು ಹಿಂದೂಗಳ ಶ್ರದ್ದೆಯನ್ನು ಲೆಕ್ಕಿಸದೆ ಇರುವುದು? ರಜೆ ಘೋಷಣೆ ಮಾಡಿ ಸಿದ್ದರಾಮಯ್ಯನವರೇ, ಹಿಮಾಚಲದ ಕಾಂಗ್ರೆಸ್ ನಾಯಕರಿಂದ ಕಲಿತುಕೊಳ್ಳಿ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ. ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ ನಿಂದನೆಗಳ ಪರಿಣಾಮ ಈಗಾಗಲೇ ಕಳಂಕದ ಭಾರ ನಿಮ್ಮ ಹೆಗಲೇರಿದೆ. ಈಗಲೂ ಕಾಲಮಿಂಚಿಲ್ಲ ನಿಮ್ಮ ಮೈಸೂರಿನಿಂದಲೇ ಬಾಲ ರಾಮ ಅಯೋಧ್ಯೆಗೆ ತೆರಳಿದ್ದಾನೆ ಶತಕೋಟಿ ಜನರ ಹೃದಯಗಳ ನಾಳೆ ಆವರಿಸಿಕೊಳ್ಳಲಿದ್ದಾನೆ, ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡು ದಿನವಿಡೀ ರಾಮ ಸ್ಮರಣೆ ಮಾಡಲು ಹಂಬಲಿಸುತ್ತಿರುವ ಜನರ ಭಾವನೆಗಳನ್ನು ಗೌರವಿಸಲು ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ದೇಶದ 14 ರಾಜ್ಯಗಳು ಈಗಾಗಲೇ ಜನವರಿ 22ರ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ರಜೆ ಘೋಷಣೆ ಮಾಡಿವೆ. ಕೇಂದ್ರ ಸರ್ಕಾರ ಅರ್ಧ ದಿನ & ಇತರ ಖಾಸಗಿ ಸಂಸ್ಥೆಗಳು ಕೂಡ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಜೆ ಘೋಷಣೆ ಮಾಡಿವೆ. ಅತ್ಯಂತ ಪ್ರಾಮುಖ್ಯತೆಯ, ಶ್ರದ್ಧೆಯ ಈ ಶ್ರೀರಾಮನ ಉತ್ಸವ ರಾಜಕೀಯ ಮೀರಿದಂತಹದ್ದು. ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು, ಇಂತಹ ವಿಷಯಗಳಲ್ಲಿ ರಾಜಕೀಯ ಮಾಡದೇ, ರಾಜ್ಯಾದ್ಯಂತ ರಜೆ ಘೋಷಣೆ ಮಾಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ತೇಜಸ್ವಿಸೂರ್ಯ ಹೇಳಿದ್ದರು.

ವಿಶೇಷ ವಿಮಾನದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ಹೊರಟ ಮಾಜಿ ಪ್ರಧಾನಿಗಳ ಕುಟುಂಬ

ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

ಅಯೋಧ್ಯೆ ಹನುಮನ ಮಂದಿರದ ಅಂಗಳ ಗುಡಿಸಿದ ನಟಿ ಕಂಗನಾ

About The Author