Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಮಸೀದಿಯಲ್ಲಿ ಶ್ರೀರಾಮನಿಗೆ ಭರ್ಜರಿ ಪೂಜೆ ನಡೆಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಗ್ರಾಮದ ಎರಡೂ ಮಸೀದಿಗಳ ಮತ್ತು ಸಯ್ಯದ್ ಅಲಿ ದರ್ಗಾದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡಿದ್ದು, ಒಂದು ಮಸೀದಿಯೊಳಗೆ ಶ್ರೀರಾಮನ ಫೋಟೋ ಇಟ್ಟಿದ್ದು, ಇನ್ನೊಂದು ಮಸೀದಿಯ ಅಂಗಳದಲ್ಲಿ ರಾಮನ ಫೋಟೋ ಇಟ್ಟು ಪೂಜೆ ನೆರವೇರಿಸಿದ್ದಾರೆ. ಇಷ್ಟೇ ಅಲ್ಲದೇ, ಅನ್ನಸಂತರ್ಪಣೆ ಕೂಡ ಮಾಡಲಾಗಿದೆ. ಕೆಲವು ಮುಸ್ಲಿಂ ಬಾಂಧವರು ಕೇಸರಿ ಬಣ್ಣದ ಬಟ್ಟೆ ತೊಟ್ಟು, ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದು ಘೋಷಣೆ ಕೂಡ, ಭಕ್ತಿ ಮೆರೆದಿದ್ದಾರೆ. ಈ ಮೂಲಕ ಹುಬ್ಬಳ್ಳಿಯ ಮುಸ್ಲಿಂಮರು ಭಾವೈಕ್ಯತೆ ಮೆರೆದಿದ್ದಾರೆ.
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’