National News: ನಿನ್ನೆಯಷ್ಟೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗಿದ್ದು, ರಾಮಭಕ್ತರ ಹಲವು ದಶಕಗಳ ಕನಸು ನನಸಾಗಿದೆ. ಬಾಲ ರಾಮನನ್ನು ನಾವೆಲ್ಲಾ ರಾಮಲಲ್ಲಾ ಎಂದು ಕರೆಯುತ್ತಿದ್ದೆವು. ಆದರೆ ಇಲ್ಲಿನ ಪ್ರಧಾನ ಅರ್ಚಕರು ರಾಮಲಲ್ಲಾಗೆ ಹೊಸ ಹೆಸರನ್ನು ನಾಮಕರಣ ಮಾಡಿದ್ದಾರೆ.
ನಿನ್ನೆ ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಜೊತೆ ರಾಮಲಲ್ಲಾನ ಪ್ರಾಣಪ್ರತಿಷ್ಠೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟಿದ್ದು, ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಾದ ಅರುಣ್ ದೀಕ್ಷಿತ್ ಅವರು.
ಅರುಣ್ ದೀಕ್ಷಿತ್ ಅವರು ರಾಮಲಲ್ಲಾಗೆ ಬಾಲಕ ರಾಮನೆಂದು ಹೊಸ ಹೆಸರನ್ನಿಟ್ಟಿದ್ದಾರೆ. ಇನ್ನುಮುಂದೆ ರಾಮಲಲ್ಲಾ ಬಾಲಕರಾಮನೆಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. ಬಾಲಕ ರಾಮನ ಮುಖದಲ್ಲಿರುವ ದೈವಿಕ ಕಳೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಜನ ಅಯೋಧ್ಯೆಗೆ ಬಂದು ರಾಮನ ದರ್ಶನ ಮಾಡಬೇಕು ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
ಎಮರ್ಜೆನ್ಸಿ ಚಿತ್ರ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಟಿ ಕಂಗನಾ ರಾಣಾವತ್
ರಾಮನು ಎಲ್ಲರಿಗೂ ಸೇರಿದವನು, ಆತ ಯಾರ ಆಸ್ತಿಯೂ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವ ವರೆಗೆ ನಾವು ವಿರಮಿಸುವುದಿಲ್ಲ: ಸಿಎಂ