Tumakuru News: ತುಮಕೂರು: ಬಿಜೆಪಿ ಕಾರ್ಯಕರ್ತರು ಬಿಜೆಪಿ ಶಾಲು ಹಾಕಿಕೊಂಡು ಬಂದ ಕಾರಣಕ್ಕೆ, ತುಮಕೂರಿನಲ್ಲಿ ಕಾಂಗ್ರೆಸ್- ಬಿಜೆಪಿ ಕಾಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ತುಮಕೂರಿನ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ವಾಟನೆ ಕಾರ್ಯಕ್ರಮದಲ್ಲಿ ಈ ಗಲಾಟೆ ನಡೆದಿದ್ದು, ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಬಿಜೆಪಿ ಕಾರ್ಯಕರ್ತರು ಬಿಜೆಪಿ ಶಾಲು ಹಾಕಿದ್ದಕ್ಕೆ, ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಶಾಲು ಯಾಕೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ವಾಗ್ದಾಳಿ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಪರಮೇಶ್ವರ್ ಶಿವಾನಂದ ಪಾಟೀಲ್ , ಬಿಜೆಪಿಯ ಸುರೇಶ್ ಗೌಡ ಜ್ಯೋತಿ ಗಣೇಶ್ ಭಾಗಿಯಾಗಿದ್ದರು.
ರಾಜಸ್ಥಾನದ ಯುವತಿ- ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸಹೋದರರು
ಇಂಡಿಯಾ ಒಕ್ಕೂಟದಿಂದ ಹೊರಬಂದ ಟಿಎಂಕೆ: ಲೋಕಸಭೆ ಚುನಾವಣೆ ಏಕಾಂಗಿಯಾಗಿ ಎದುರಿಸಲು ನಿರ್ಧಾರ
ತಸ್ತೀಕ್ ಹಣ ವಾಪಾಸ್ ಕೇಸ್: ತಹಶೀಲ್ದಾರರದ್ದೇ ತಪ್ಪು, ಕಣ್ಣನ್ ಅವರ ತಪ್ಪಿಲ್ಲವೆಂದ ಸಿಎಂ




