Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಸಂಚಾರಿ ವಿಭಾಗದ ಎಡಿಜಿಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ನಿಯಮ ಉಲ್ಲಂಘನೆ ದಂಡ ಬಾಕಿ ಉಳಿಸಿಕೊಂಡ್ರೆ ಪೊಲೀಸರೇ ನಿಮ್ಮ ಮನೆಗೆ ಬರ್ತಾರೆ. 15 ದಿನದಲ್ಲೆ ದಂಡ ಕಟ್ಟಬೇಕು, ಐದಕ್ಕಿಂತ ಹೆಚ್ಚು ಪ್ರಕರಣ ಬಾಕಿ ಉಳಿಸಿಕೊಂಡರು ಕಷ್ಟ. ಟ್ರಾಫಿಕ್ ನಿಯಮಗಳ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಲಾ& ಆರ್ಡರ್ ಠಾಣೆಯಲ್ಲಿ ಪಿಎಸ್ ಐ ಅಧಿಕಾರಿಗೆ ಸ್ಥಳದಲ್ಲಿಯೇ ಫೈನ್ ಕಟ್ಟಿಸಿಕೊಳ್ಳುವ ಅಧಿಕಾರವಿದೆ. ಯಾರಾದರೂ ಈ ಬಗ್ಗೆ ಅಪಪ್ರಚಾರ ಮಾಡಿದ್ರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನೂ ಮುಂದೆ ಟ್ರಾಫಿಕ್ ಫೈನ್ ಕಟ್ಟಲು ಯಾವುದೇ ಆಫರ್ ಇರೋದಿಲ್ಲ.. ಪೂರ್ತಿ ದಂಡ ವಾಹನ ಸವಾರರು ಕಟ್ಟಲೇ ಬೇಕು. ಅರ್ಧ ದಂಡ ಕಟ್ಟುವ ಆಫರ್ ನೀಡಿದ್ರೆ ನ್ಯಾಯುತವಾಗಿರುವ ನಾಗರಿಕರಿಗೆ ಮೋಸ ಮಾಡಿದ್ದಂತಾಗುತ್ತದೆ. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ ದಂಡವನ್ನು 15 ದಿನದಲ್ಲೆ ಕಟ್ಟಬೇಕು. ಐದಕ್ಕಿಂತ ಹೆಚ್ಚು ಪ್ರಕರಣಗಳ ದಂಡ ಉಳಿಸಿಕೊಂಡ್ರು ಕಷ್ಟ .ಇಲ್ಲದಿದ್ದರೆ ಪೊಲೀಸರೇ ನಿಮ್ಮ ಮನೆಗೆ ಬಂದು ದಂಡ ಕಟ್ಟಿಸಿಕೊಳ್ಳತ್ತಾರೆ ಎಂದು ಹೇಳಿದ್ದಾರೆ..
ಅಲ್ಲದೇ, ನಾವು ಟ್ರಾಫಿಕ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಸಭೆ ಮಾಡುತ್ತಿದ್ದೇವೆ. ಸಂಚಾರಿ ನಿಯಮಗಳು ಪಾಲನೆ ಬಗ್ಗೆ ನಾವು ಜನರಿಗೆ ಸತತವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಸಹ ಪೊಲೀಸರ ಜೊತೆಗೆ ಕೈ ಜೋಡಿಸಬೇಕು. ಬೆಂಗಳೂರಿನ ಟ್ರಾಫಿಕ್ ಸ್ಮಾರ್ಟ್ ಮತ್ತು ಇಂಟಲಿಜೆನ್ಸ್ ಕಂಟ್ರೋಲ್ ಮಾದರಿ ಉತ್ತರ ಕರ್ನಾಟಕ ಪ್ರಮುಖ ಜಿಲ್ಲೆಗಳಲ್ಲಿ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿಯಲ್ಲಿ ವಿಶೇಷ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ
ತಸ್ತೀಕ್ ಹಣ ವಾಪಾಸ್ ಕೇಸ್: ತಹಶೀಲ್ದಾರರದ್ದೇ ತಪ್ಪು, ಕಣ್ಣನ್ ಅವರ ತಪ್ಪಿಲ್ಲವೆಂದ ಸಿಎಂ
ಇಂಡಿಯಾ ಒಕ್ಕೂಟದಿಂದ ಹೊರಬಂದ ಟಿಎಂಸಿ: ಲೋಕಸಭೆ ಚುನಾವಣೆ ಏಕಾಂಗಿಯಾಗಿ ಎದುರಿಸಲು ನಿರ್ಧಾರ