Hubballi News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಕೀಯ ನಡೆ ಏನು ಎಂಬುದು ಇನ್ನು ಎಂಟು ದಿನಗಳಲ್ಲಿ ನಿರ್ಧಾರವಾಗಲಿದೆ. ಕಳೆದ ಚುನಾವಣೆಯಲ್ಲಿ ಯಾರಿಗೂ ಬೇಡವಾದ ಶೆಟ್ಟರ್, ಇಂದು ಎಲ್ಲರಿಗೂ ಬೇಕಾಗಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಎರಡು ಪಕ್ಷಗಳೂ ಸರ್ಕಸ್ ನಡೆಸಿದ್ದು, ಶೆಟ್ಟರ್ ನಡೆ ಮಾತ್ರ ನಿಗೂಢವಾಗಿದೆ. ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದ ಕಾಂಗ್ರೆಸ್ ಜೊತೆಯೇ ಇರುತ್ತಾರಾ ಅಥವಾ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮತ್ತೆ ತವರು ಸೇರುತ್ತಾರಾ ಅನ್ನೋ ಕುತೂಹಲ ಹಲವರಲ್ಲಿ ಮನೆ ಮಾಡಿದೆ. ಈಗಾಗಲೇ ಬಿಜೆಪಿಗೆ ಶೆಟ್ಟರ್ ಅವರನ್ನು ವಾಪಸ್ ತರಲು ಹಲವು ಪ್ರಯತ್ನಗಳನ್ನು ನಡೆಸಿದೆ. ಮತ್ತೊಂದು ಕಡೆ ಪಕ್ಷದಲ್ಲೆ ಉಳಿಸಿಕೊಂಡು ಉತ್ತರ ಕರ್ನಾಟಕ ದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, ಎರಡೂ ಪಕ್ಷಗಳ ಟಾರ್ಗೇಟ್ ಸದ್ಯಕ್ಕೆ ಲೋಕಸಭಾ ಚುನಾವಣೆಯಾಗಿದೆ.
ಇನ್ನು ಯಾಕೆ ಜಗದೀಶ್ ಶೆಟ್ಟರ್‌ಗೆ ಇಷ್ಟು ಪ್ರಾಮುಖ್ಯತೆ ಎಂದರೆ, ಅವರ ಹಿಂದೆ ಪ್ರಬಲ ಲಿಂಗಾಯಿತ ಸಮುದಾಯವಿದೆ. ಇದನ್ನು ನಿರ್ಲಕ್ಷಿಸಿದ್ದ ಬಿಜೆಪಿ, ವಿಧಾನಸಭಾ ಚುನಾವಣೆ ಹೊತ್ತಲ್ಲಿ, ಶೆಟ್ಟರ್‌ಗೆ ಟಿಕೇಟ್ ನೀಡದೇ, ಚುನಾವಣೆಯಿಂದ ದೂರವಿರಿಸಿತ್ತು. ಆದರೆ ಈಗ ಆ ತಪ್ಪು ತಿದ್ದಿಕೊಂಡು, ಮತ್ತೆ ಮನೆಗೆ ಕರೆತರುವ ಚಿಂತನೆ ನಡೆಸಿದೆ. ಈ ಮೂಲಕ ಶೆಟ್ಟರ್ ರಾಜಕೀಯ ಅನುಭವ ಮತ್ತು ಲಿಂಗಾಯತಾಸ್ತ್ರ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ.
ಮತ್ತೊಂದೆಡೆ ಉತ್ತರಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೊಳಿಸಲು ಕಾಂಗ್ರೆಸ್‌ಗೆ ಶೆಟ್ಟರ್ ಅನಿವಾರ್ಯವಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಜವಾಬ್ದಾರಿ ನೀಡಿ ಲಿಂಗಾಯತ ಮತಗಳ ಸೆಳೆಯುವ ಪ್ಲಾನ್ ಮಾಡಿದೆ. ಹಾಗಾಗಿ ಶೆಟ್ಟರ್ ಅಂತಿಮ ನಿರ್ಧಾರವೇನು ಅನ್ನೋದರ ಬಗ್ಗೆ ಎರಡೂ ಪಕ್ಷದವರಿಗೆ ಕುತೂಹಲ ಮನೆ ಮಾಡಿದೆ.
ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್