‘ದಾವಣಗೆರೆ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಸಮೀಕ್ಷೆ ಮಾಡಿ ಲೋಕಸಭೆ ಟಿಕೆಟ್ ಕೊಡಲಿ’

Tumakuru News: ತುಮಕೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಜಗದೀಶ್ ಶೆಟ್ಟರು ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಬೇಕು. ಎಂಬ ಉದ್ದೇಶದಿಂದ ಸಂಘಟನೆ ಮಾಡಲು ಅವರು ಬಂದಿದ್ದಾರೆ ಎಂದು ಹೇಳಿದರು.

ಲೋಕಸಭೆಯ 28 ಕ್ಷೇತ್ರಗಳನ್ನು ಗೆಲ್ಲಿಸಲು ಜಗದೀಶ್ ಶೆಟ್ಟರ್ ಪುನರ್ ಸೇರ್ಪಡೆಯಾಗಿದ್ದಾರೆ. ಇಡೀ ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರಿಗೆ ಜಗದೀಶ ಶೆಟ್ಟರು ವಾಪಸ್ ಬಂದಿರುವುದಕ್ಕೆ ಸಂತಸವಿದೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಾಗ ನಾನು ಯಾವತ್ತೂ ವಾಗ್ದಾಳಿ ಮಾಡಿರಲಿಲ್ಲ. ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ನನಗೂ ನೋವಿತ್ತು. ಅವರ ವಿರುದ್ಧ ನಾನು ಮಾತಾಡಿದ್ದಿದ್ರೆ ರಾಜಕಾರಣವನ್ನೇ ಬಿಡ್ತೀನಿ. ಅವರು ಸೋತ ನಂತರ ನಾನು ನಿರಂತರವಾಗಿ ಅವರ‌ ಸಂಪರ್ಕದಲ್ಲಿ ಇದ್ದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಜಗದೀಶ್ ಶೆಟ್ಟರಿಗೆ ಲೋಕಸಭಾ ಟಿಕೆಟ್ ಕೊಡುವ ವಿಚಾರ ಅದು ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಾಗ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು ಸತ್ಯ. ಹಾಗಂತ ಪ್ರತಿದಿನವೂ ಯುದ್ಧ ಮಾಡಲಿಕ್ಕೆ ಆಗುತ್ತಾ. ಸಂಘರ್ಷದ ನಂತರ ಸಾಮರಸ್ಯ ಇರಬೇಕಲ್ವಾ. ಅವರು ಹಳೆಯದನ್ನು ಮರಿಯಬೇಕಲ್ವಾ ಎಂದು ರೇಣುಕಾಚಾರ್ಯ ಹೇಳಿದರು.

ವಿ ಸೋಮಣ್ಣ ತುಮಕೂರಿನ ಬಿಜೆಪಿಯ ಅಭ್ಯರ್ಥಿ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಸಚಿವ ರೇಣುಕಾಚಾರ್ಯ, ಅದು ನನಗೆ ಗೊತ್ತಿಲ್ಲ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ದಾವಣಗೆರೆ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಸಮೀಕ್ಷೆ ಮಾಡಿ ಲೋಕಸಭೆ ಟಿಕೆಟ್ ಕೊಡಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್..

‘ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಿಷ್ಯ ಕಾಂಗ್ರೆಸ್‌ಗೆ ಗುಡ್ ಬಾಯ್

About The Author