Political News: ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಧ್ವಜ ಸ್ತಂಭದಲ್ಲಿ ಹನುಮಧ್ವಜ ಹಾಕಿದ್ದು ವಿವಾದವಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿರುವ ಸಂಭ್ರಮಕ್ಕೆ, ಮಂಡ್ಯದಲ್ಲಿ ಹನುಮಧ್ವಜವನ್ನು ಹಾರಿಸಲಾಗಿತ್ತು. ಆದರೆ ಆ ಧ್ವಜ ಇಳಿಸಲು ಒತ್ತಾಯಿಸಲಾಗಿದೆ. ಈ ಬಗ್ಗೆ ಗಲಾಟೆ ನಡೆದಿದೆ. ಇನ್ನು ಈ ವಿಚಾರವಾಗಿ ಮಾಜಿ ಸಚಿವ ಸಿ.ಟಿ.ರವಿ ಬೇಸರ ಹೊರಹಾಕಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಅಯೋಧ್ಯ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಾರಿಸಲಾಗಿದ್ದ ಹನುಮ ಧ್ವಜ ಇಳಿಸಿದ ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಹನುಮ ಧ್ವಜವನ್ನು ನಿಷೇಧಿಸಿದೆಯೇ? ನಿಷೇಧ ಮಾಡದಿದ್ದರೆ, ಅನುಮತಿ ಪಡೆದು ಧ್ವಜ ಸ್ಥಂಭಕೆ ಕಟ್ಟಿದ ಹನುಮಧ್ವಜವನ್ನು ಕಿತ್ತು ಹಾಕಿದ್ದು ಯಾಕೆ? ಅಧಿಕಾರಿಗಳ ಉದ್ಧಟನವಾದರೆ ಕೂಡಲೇ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಿ.
ಆಳುವವರ ಮರ್ಜಿಗೆ ಅನುಗುಣವಾಗಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರೆ, ನಿಮಗೆ ತಾನು ಹಿಂದೂ ಎಂದು ಕರೆದುಕೊಳ್ಳುವ ಯಾವ ನೈತಿಕತೆಯು ಉಳಿದಿಲ್ಲ. ನನ್ನ “ಹೆಸರಿನಲ್ಲಿ ರಾಮ ಇದ್ದಾನೆ, ನಾನೂ ಹಿಂದು” ಎಂದು ಹೇಳಿಕೊಳ್ಳುವ ಯಾವ ನೈತಿಕತೆಯೂ ಇಲ್ಲ. ನೀವು ಮಾಡಿರುವುದು ಜನರ ಭಾವನೆಗಳನ್ನು ಕೆಣಕುವ ಕೆಲಸ.
ಅಧಿಕಾರದ ಬಲದಿಂದ, ಅಧಿಕಾರದ ಮದದಿಂದ ಆಡಳಿತ ಯಂತ್ರದ ದುರುಪಯೋಗ ಮಾಡಿ ಧ್ವಜ ಇಳಿಸಿರಬಹುದು. ಇದೆ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಈ ಹಿಂದೂ ವಿರೋಧಿ ನೀತಿಯನ್ನು ಕಟುವಾಗಿ ಖಂಡಿಸುತ್ತೇನೆ. ಮನೆ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
‘ನಾವು ಬಿಹಾರಕ್ಕೆ ಹೋಗೋದು ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.