ಶೆಟ್ಟರ್‌ಗೆ ಗಂಡಸ್ತನ ಇದ್ರೆ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಂಡು ತೋರಿಸಲಿ: ಶರಣಪ್ಪ ಕೊಟಗಿ ಸವಾಲು

Hubli Political News: ಹುಬ್ಬಳ್ಳಿ: ಶೆಟ್ಟ‌ರ್ ಗಂಡಸ್ತನ, ಧಮ್ ಬಗ್ಗೆ ಮಾತನಾಡುತ್ತಾರೆ. ಈಗ ಅವರಿಗೆ ತಾಕತ್ತಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಶರಣಪ್ಪ ಕೊಟಗಿ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ಅನ್ನು ಶೆಟ್ಟ‌ರ್ ಅವರಿಗೆ ಕೊಡಿಸಲಿ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನ ಬಳಕೆ ಮಾಡಿಕೊಂಡು ದ್ರೋಹ ಮಾಡಿದ್ದಾರೆ. ಅವರ ಹಿಂದೆ ಲಿಂಗಾಯತ ಸಮುದಾಯ ಇಲ್ಲ. ಶೆಟ್ಟರ್‌ಗೆ ಯಾವುದೇ ಜನಬೆಂಬಲ ಇಲ್ಲ. ಅದೇ ಕಾರಣಕ್ಕಾಗಿ 35 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆಂದು ಮಾಧ್ಯಮಗೋಷ್ಠಿಯಲ್ಲಿ ಶೆಟ್ಟರ್ ವಿರುದ್ಧ ಶರಣಪ್ಪ ಕೊಟಗಿ ವಾಗ್ದಾಳಿ ನಡೆಸಿದ್ದಾರೆ.

‘ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.

ಏಕಾಏಕಿ ಹನುಮಧ್ವಜ ಕೆಳಗಿಳಿಸಿ, ರಾಮನ ಬ್ಯಾನರ್ ಕಿತ್ತು ಹಾಕಿರುವುದು ಸರಿಯಾದ ಕ್ರಮವಲ್ಲ: ಸಂಸದೆ ಸುಮಲತಾ

ಕೇಂದ್ರದಿಂದ ಐಟಿ-ಇಡಿ ಬೆದರಿಕೆ ಇದ್ದಿದ್ದರೆ 9 ತಿಂಗಳ ಹಿಂದೆ ಮಾಡಬೇಕಿತ್ತು: ಜಗದೀಶ್ ಶೆಟ್ಟರ್

About The Author