Saturday, November 15, 2025

Latest Posts

ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ಹಿಂದೂ ವಿರೋಧಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಹಾರದಲ್ಲಿ ಅಪವಿತ್ರ ಮೈತ್ರಿ ಇತ್ತು. ಈಗ ಅದು ಅಂತ್ಯವಾಗಿದೆ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಬಗ್ಗೆ ನಾವು ಟೀಕೆ ಟಿಪ್ಪಣಿ ಮಾಡಿದ್ದೇವೆ. ಆದ್ರೆ ಯಾವತ್ತೂ ಸಹ ವೈಯಕ್ತಿಕವಾಗಿ ಟೀಕಿಸಿಲ್ಲ. ಭ್ರಷ್ಟಾಚಾರ, ಪರಿವಾರವಾದಿ ಬಗ್ಗೆ ಟೀಕೆ ಮಾಡಿದ್ದೆವು. ಭ್ರಷ್ಟ ಪರಿವಾರವಾದಿ ಜೊತೆ ಇವರಿಗೆ ನೀಗೋಲ್ಲ ಅಂತ ಗೊತ್ತಿತ್ತು. ಇವತ್ತು ನಿತೇಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದಾರೆ. ಮುಂದೆನಾಗುತ್ತೋ ನೋಡೋಣ ಎಂದು ಜೋಶಿ ಹೇಳಿದ್ದಾರೆ.

ಐ.ಎನ್.ಡಿ.ಐ.ಎ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ನಾಯಕತ್ವ ಕೊಟ್ಟಿದ್ದಕ್ಕೆ ಈ ಬೆಳವಣಿಗೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ ಅವರು,  ಆ ಕಾರಣಕ್ಕೆ ಆಗಿದೆ ಅಂತ ಅನ್ನೋಕೆ ಆಗಲ್ಲ. ಲಾಲು ಪ್ರಸಾದ್ ಮತ್ತು ಇತರೆ ಪರಿವಾರದವರು ಇವರಿಗೆ ತೊಂದರೆ ಕೊಟ್ಟರು. ಅದರಿಂದಾಗಿ ಈ ರೀತಿಯ ಬೆಳವಣಿಗೆಯಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇನ್ನು ಹನುಮ ಧ್ವಜ ತೆಗಿಸುತ್ತಿರುವ ವಿಚಾರದದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಈ ಬೆಳವಣಿಗೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ರಾಜ್ಯ ಸರ್ಕಾರ ಹಿಂದೂ ವಿರೋಧಿ. ಸಿದ್ದರಾಮಯ್ಯ ಒಬ್ಬ ಹಿಂದೂ ವಿರೋಧಿ. ಮುಸಲ್ಮಾನರ ತುಷ್ಟಿಕರಣ ಮಾಡುವ ವ್ಯಕ್ತಿ ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಿಂದ ಅಹಿಂದ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಜೋಶಿ,  ಯಾಕೆ ಅಹಿಂದ ಸಮಾವೇಶ ಮಾಡ್ತಾರೆ. ಮೊದಲ ಪದ ಅ ಒಂದೇ ಮಾಡು ಅನ್ನಿ. ಹಿಂದಿನ ಪದ ಅವರಿಗೆ ಇದು ಸಂಬಂಧವಿಲ್ಲ ಎಂದು ಜೋಶಿ ಹೇಳಿದ್ದಾರೆ.

‘ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.

ಏಕಾಏಕಿ ಹನುಮಧ್ವಜ ಕೆಳಗಿಳಿಸಿ, ರಾಮನ ಬ್ಯಾನರ್ ಕಿತ್ತು ಹಾಕಿರುವುದು ಸರಿಯಾದ ಕ್ರಮವಲ್ಲ: ಸಂಸದೆ ಸುಮಲತಾ

ಕೇಂದ್ರದಿಂದ ಐಟಿ-ಇಡಿ ಬೆದರಿಕೆ ಇದ್ದಿದ್ದರೆ 9 ತಿಂಗಳ ಹಿಂದೆ ಮಾಡಬೇಕಿತ್ತು: ಜಗದೀಶ್ ಶೆಟ್ಟರ್

- Advertisement -

Latest Posts

Don't Miss