Chinthamani: ಚಿಂತಾಮಣಿ: ಚಿಂತಾಮಣಿ ತಾಲೂಕಿನ ಪೊಲೀಸರಿಗೆ, ನೀವು ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತೀರಿ. ಹಾಗಾಗಿ ನಿಮ್ಮ ಪೊಲೀಸ್ ಠಾಣೆಯ ಹೆಸರನ್ನು, ಚಿಂತಾಮಣಿ ಪೊಲೀಸ್ ಠಾಣೆ ಎನ್ನುವ ಬದಲು, ಕಾಂಗ್ರೆಸ್ ಪೊಲೀಸ್ ಠಾಣೆ ಎಂದು ಬದಲಾಯಿಸಿ ಎಂದು ಜೆಡಿಎಸ್ ಮಾಜಿ ಶಾಸಕ, ಜೆ.ಕೆ.ಕೃಷ್ಣರೆಡ್ಡಿ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲದ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ಸಿಟ್ಟಾಗಿದ್ದ ಮಾಜಿ ಶಾಸಕರು, ಹತ್ತು ವರ್ಷ ನಾನು ಅಧಿಕಾರ ವಹಿಸಿದ್ದೇನೆ. ಇಂತ ಹಲ್ಕಾ ಕೆಲಸ ನಾನು ಮಾಡಿಲ್ಲ. ಸಿಎಂ ಅವರು ಮೌಕಿಕವಾಗಿ ಅಥವಾ ಲಿಖಿತವಾಗಿ ಆದೇಶ ಮಾಡಿದ್ದರೂ, ಅದನ್ನು ಚಿಂತಾಮಣಿ ಪೊಲೀಸರು ಬೂಟಿನಲ್ಲಿ ಉಜ್ಜುತ್ತಿದ್ದಾರೆ. ಅಂದ್ರೆ ಹೋಮ್ ಮಿನಿಸ್ಟರ್‌ಗೆ, ಚೀಫ್ ಮಿನಿಸ್ಟರ್‌ಗೆ ಗೌರವನೇ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ಇಲ್ಲಾ ಸರ್, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಆಕ್ರೋಶ ಮುಂದುವರಿಸಿದ ಕೃಷ್ಣಾ ರೆಡ್ಡಿ, ನೊಂದವರು, ದೂರುದಾರರು ಬಂದು ಎಫ್‌ಐಆರ್ ಮಾಡಿಕೊಳ್ಳಿ ಅಂದರೂ, ನೀವು ಯಾಕೆ ಮಾಡಿಕೊಳ್ಳಲಿಲ್ಲ.? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ಎಫ್‌ಐಆರ್ ದಾಖಲಿಸಿದ್ದೇವೆ ಎಂದಿದ್ದಾರೆ. ಈ ವೇಳೆ ಸಿಟ್ಟಾದ ಮಾಜಿ ಶಾಸಕರು, ಯಾರೋ ಹೇಳಿದ ಹಾಗೆ ಮಾಡಿಕೊಂಡು ಹೋಗುವುದಾದರೆ, ಚಿಂತಾಮಣಿ ಪೊಲೀಸ್ ಠಾಣೆ ಅನ್ನುವ ಬೋರ್ಡ್ ತೆಗೆದು, ಕಾಂಗ್ರೆಸ್ ಪೊಲೀಸ್ ಠಾಣೆ ಎಂಬ ಬೋರ್ಡ್ ಹಾಕಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ತಾನೇ ಸಂವಿಧಾನ ಜಾರಿಯಾದ ದಿನ. ಇದೇನಾ ಅಂಬೇಡ್ಕರ್ ಅವರು ಹೇಳಿದ್ದು. ನಿಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡಿ ಎಂದು ಹೇಳಿದ್ದಾರಾ..? ಬಸ್‌ಸ್ಟಾಂಡ್‌ಗಾಗಿ ದುಡ್ಡು ತೆಗೆದುಕೊಂಡು, ಬಸ್‌ಸ್ಟಾಂಡೇ ಕಟ್ಟಿಲ್ಲವೆಂದಲ್ಲಿ, ಆ ಬಗ್ಗೆ ಪ್ರಶ್ನಿಸುವುದು ತಪ್ಪಾ ಎಂದು ಮಾಜಿ ಶಾಸಕರು ಹರಿಹಾಯ್ದಿದ್ದಾರೆ.
ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane
ಮಂಡ್ಯದ ಹನುಮಧ್ವಜ ತೆರವುಗೊಳಿಸಿದ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ನಟ ಸೂರ್ಯ ಜೊತೆ ಡಿವೋರ್ಸ್ ವಿಚಾರ: ಸ್ಪಷ್ಟನೆ ನೀಡಿದ ನಟಿ, ನಿರ್ಮಾಪಕಿ ಜ್ಯೋತಿಕಾ