Monday, November 17, 2025

Latest Posts

ಬಿಜೆಪಿ ಮನೆಯೊಂದು ಬಣ ಮೂರು – ಮೂರು ಹೋಳಾಯಿತೇ ಧಾರವಾಡ ಜಿಲ್ಲೆಯ ರಾಜಕಾರಣ?

- Advertisement -

Hubballi News: ಹುಬ್ಬಳ್ಳಿ: ಬಿಜೆಪಿ ಭದ್ರಕೋಟೆಯಲ್ಲಿ ಬಣಗಳ ಸೃಷ್ಟಿಯಾಗಿದೆ. ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಹುಟ್ಟಿಕೊಂಡಿವೆ ಮೂರು ಬಣಗಳು. ಇದರಿಂದಾಗಿ ಧಾರವಾಡದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರ ಉಳಿದಿದ್ದಾರೆ. ಬಣಗಳ ಸೃಷ್ಟಿಯಿಂದ ಜಿಲ್ಲೆಯಿಂದ ಅಂತರ ಕಾಯ್ದುಕೊಳುತ್ತಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಮೂರು ತಿಂಗಳು ಕಳೆಯುತ್ತಾ ಬಂದ್ರು ಧಾರವಾಡ ಜಿಲ್ಲೆಗೆ ಭೇಟಿ ನೀಡದ ವಿಜಯೇಂದ್ರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹೌದು.. ಕಳೆದ ಒಂದು ವರ್ಷದ ಹಿಂದೆ ಶೆಟ್ಟ‌ರ್ ಮತ್ತು ಜೋಶಿ ಉತ್ತರ ಕರ್ನಾಟಕದ ಬಿಜೆಪಿಯ ಜೋಡೆತ್ತುಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೋಡೆತ್ತುಗಳು ಅಗಲಿದ್ದವು. ಈ ನಿಟ್ಟಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಿಂದಲೇ ಧಾರವಾಡ ಜಿಲ್ಲೆಯಲ್ಲಿ ಬಣಗಳು ಹುಟ್ಟಿಕೊಂಡಿವೆ ಎನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಎರಡೂ ಬಣಗಳಿದ್ದವು. ಈಗ ಶೆಟ್ಟರ್ ಮತ್ತೆ ಮರಳಿ ಸ್ವಪಕ್ಷಕ್ಕೆ ಬಂದಿದ್ದರಿಂದ ಮತ್ತೊಂದು ಬಣ ಹುಟ್ಟಿಕೊಂಡಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರದ್ದು ಒಂದು ಬಣ, ಬಿ.ಎಲ್.ಸಂತೋಷ ಅವರದ್ದು ಇನ್ನೊಂದು ಬಣ, ಮಾಜಿ ಮುಖ್ಯಮಂತ್ರಿ ಜಗದೀಶ್ ಅವರ ಮತ್ತೊಂದು ಬಣ. ಶೆಟ್ಟ‌ರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಅಲ್ಲದೆ ವಿಧಾನ ಪರಿಷತ್‌ ಸದಸ್ಯ ಪ್ರದೀಪ್ ಶೆಟ್ಟ‌ರ್. ಜೋಶಿಯವರ ಬಣದಲ್ಲಿದ್ದಾರೆ ಶಾಸಕರಾದ ಅರವಿಂದ ಬೆಲ್ಲದ, ಎಮ್.ಆರ್.ಪಾಟೀಲ್‌, ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ವಿಧಾನ ಪರಿಷತ್‌ ಸದಸ್ಯ ನಾಗರಾಜ್ ಛಬ್ಬಿ. ಇನ್ನೂ ಬಿ.ಎಲ್.ಸಂತೋಷ ಬಣದಲ್ಲಿ ಕಾಣಿಸಿಕೊಂಡವರು ಶಾಸಕ ಮಹೇಶ್ ಟೆಂಗಿನಕಾಯಿ ಮಾತ್ರ. ಒಬ್ಬೊಬ್ಬ ನಾಯಕ ಒಂದೊಂದು ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಬಿಜೆಪಿ ನಾಯಕರನ್ನು ಹುಡುಕುವುದೆ ಬಿ.ವೈ.ವಿಜಯೇಂದ್ರನಿಗೆ ತಲೆನೋವಾಗಿದೆ. ಅಲ್ಲದೇ ಇದೇ ಬಣಗಳ ರಾಜಕಾರಣದಿಂದ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಅತಿ ದೊಡ್ಡ ಪರಿಣಾಮ ಬೀಳಲಿದೆ ಎಂಬುವಂತ ರಾಜಕೀಯ ಮುಖಂಡರ ಲೆಕ್ಕಾಚಾರ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

‘ಲಿಂಗಾಯತ ಸಮೂದಾಯದ ನಾಯಕರಿಗೆ ಅನ್ಯಾಯ ಅಗಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ’

‘ರಾಮ ಪ್ರಾಣಪ್ರತಿಷ್ಠಾಪನೆ ಪೂಜೆ ಮೋದಿ ಮಾಡಿದ್ದು ತಪ್ಪು. ಬ್ರಾಹ್ಮಣರೇ ಪೂಜೆ ಮಾಡಬೇಕಲ್ವಾ?’

ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್‌ರಿಂದ ಸಿದ್ಧಾರೂಢರಿಗೆ ವಿಶೇಷ ಪೂಜೆ

- Advertisement -

Latest Posts

Don't Miss