ಜಗದೀಶ್ ಶೆಟ್ಟರ್ ಒಪ್ಪದ ಸ್ಥಳೀಯ ಬಿಜೆಪಿ..? ಏಕಾಂಗಿ ಹೋರಾಟ ಮಾಡ್ತಾರಾ ಮಾಜಿ ಸಿಎಂ..?

Political News: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸಾಗಿ, ಅದ್ದೂರಿಯಾಗಿ ಹುಬ್ಬಳ್ಳಿ ಧಾರವಾಡ ಎಂಟ್ರಿ ನೀಡಿದ್ದಾರೆ.. ಶೆಟ್ಟರ್ ಆಗಮನದ ಬೆನ್ನಲ್ಲೇ ಬಿಜೆಪಿ ಭದ್ರಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸೂಚನೆಗಳು ಹೊರ ಬರುತ್ತಿವೆ.. ಶೆಟ್ಟರ್ ಬಣ ಮತ್ತು ಹಾಲಿ ಶಾಸಕರ ಬಣಗಳು ನಿರ್ಮಾಣವಾಗಿದ್ದು, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ಬಂದಿರುವ ಬತ್ತಳಿಕೆಯಲ್ಲಿ ಯಾವ ಅಸ್ತ್ರಗಳಿಲ್ಲದೇ ಒಂಟಿಯಾದ್ರಾ ಎನ್ನುವ ಅನುಮಾನ ಮೂಡುತ್ತಿವೆ..

ಪಕ್ಷ ಬಿಟ್ಟು ಹೋಗಿ ತಮ್ಮ ವಿರೋಧಿಗಳಿಗೆ ಮತ್ತು ಬಿಜೆಪಿ ಹೈಕಮಾಂಡ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಪವರ್ ಅರ್ಥಮಾಡಿಸಿದ ಪರಿಣಾಮ, ಬಿಜೆಪಿ ಹೈಕಮಾಂಡ್ ಶೆಟ್ಟರ್ ಗೆ ರತ್ನಗಂಬಳಿ ಹಾಸಿ ಪಕ್ಷಕ್ಕೆ ಮತ್ತೆ ಬರ ಮಾಡಿಕೊಂಡಿದೆ.‌ ಇನ್ನೂ ರಾಜ್ಯದಲ್ಲಿ ಅಧ್ಯಕ್ಷ ಬಿವೈ ವಿಜಯೇಂದ್ರ, ಯಡಿಯೂರಪ್ಪ ಅವರ ಕೃಪೆಯೂ ಸಹ ಶೆಟ್ಟರ್ ಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಶೆಟ್ಟರ್ ತಮ್ಮ ನಾಯಕರು ಅಂತ ಕಾರ್ಯಕರ್ತರು ಇರಲಿ ಸ್ವತಃ, ಹಾಲಿ‌ ಶಾಸಕರೇ ಒಪ್ಪುತ್ತಿಲ್ಲ.‌ ಇನ್ನೂ ಜಿಲ್ಲಾ ಬಿಜೆಪಿ ಘಟಕದ ಪ್ರಮುಖ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು ಸಹ ಶೆಟ್ಟರ್ ಆಗಮನದಿಂದ ಸಂತೋಷಗೊಂಡಿಲ್ಲ.. ಈ ಎಲ್ಲವನ್ನೂ ನಿಭಾಯಿಸಿಕೊಂಡು ಶೆಟ್ಟರ್ ಏಕಾಂಗಿ ಹೇಗೆ ಪಕ್ಷ ಸಂಘಟನೆ ಮಾಡುತ್ತಾರೆ?. ಬಿಜೆಪಿ ಹೈಕಮಾಂಡ್ ಶೆಟ್ಟರ್ ಮೇಲಿಟ್ಟಿರುವ ಭಾರಿ ಭರವಸೆ ಉತ್ತರ ಕರ್ನಾಟಕ ಭಾಗದಲ್ಲಿ ಎಷ್ಟಮಟ್ಟಿಗೆ ಉಪಯೋಗವಾಗುತ್ತೆ ಎನ್ನುವುದೇ ಈಗ ಎಲ್ಲರ ಕೂತುಹಲ..

ಶೆಟ್ಟರ್ ಪಕ್ಷಕ್ಕೆ ಸೇರುವಾಗ ಯಾವುದೇ ಷರತ್ತು ಹಾಕಿ ಬಂದಿಲ್ಲ ಅಂತ ಸ್ಪಷ್ಟನೆ ‌ನೀಡಿದ್ದರೂ, ಶೆಟ್ಟರ್ ಗೆ ಲೋಕಸಭಾ ಚುನಾವಣೆಯೆ ಟಾರ್ಗೆಟ್ ಎನ್ನುವುದು ಬಿಚ್ಚಿಟ್ಟ ಸತ್ಯ.. ಈಗ ಇದೆ ಹಾಲಿ ಶಾಸಕರುಗಳ ಅಸಮಾಧಾನಕ್ಕೆ ಕಾರಣವಾಗಿದೆ.. ಶಾಸಕರುಗಳಾದ ಅರವಿಂದ್ ಬೆಲ್ಲದ, ಎಂ ಆರ್ ಪಾಟೀಲ್, ಮಹೇಶ್ ಟೆಂಗಿನಕಾಯಿ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.. ಹೀಗಾಗಿ ಪ್ರಹ್ಲಾದ್ ಜೋಶಿ ಅವರೇ ನಮ್ಮ ನಾಯಕರು ಅಂತ ಹೇಳಿಕೆ‌ ನೀಡುತ್ತಿದ್ದಾರೆ..ಇಷ್ಟು ಮಾತ್ರವಲ್ಲದೆ ಶೆಟ್ಟರ್ ಪಾರ್ಟಿ ಆಫಿಸ್ ಗೆ ಹೋಗಿದ್ದರೂ ಸಹ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರುಗಳಾದ ಅರವಿಂದ್ ಬೆಲ್ಲದ, ಎಂ ಆರ್ ಪಾಟೀಲ್, ಹುಬ್ಬಳ್ಳಿಯಲ್ಲಿದ್ದರೂ ಅವರನ್ನು ಸ್ವಾಗತಿಸಲು‌ ಹೋಗಿಯೇ ಇಲ್ಲ.. ನೆಪ ಮಾತ್ರಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಶೆಟ್ಟರ ಕೈ ಕುಲಿಕಿದ್ದು ಬಿಟ್ಟ್ರೆ, ಶೆಟ್ಟರ್ ಮತ್ತೆ ಗೂಡು ಸೇರಿಕೊಂಡ ಖುಷಿ ಎಲ್ಲಿಯೂ ಕಾಣಲಿಲ್ಲ..

ಶೆಟ್ಟರ್ ವಾಪಸಿಯಿಂದ ಉತ್ತರ ಕರ್ನಾಟಕ ಭಾಗದ ಬಿಜೆಪಿಯಲ್ಲಿಗ ಮಾಜಿ ಮತ್ತು ಹಾಲಿಗಳ ಬಣ ಸೃಷ್ಟಿಯಾಗುವ ಸಾಧ್ಯತೆಯಿದೆ.. ಮಾಜಿಗಳ ಬಣದಲ್ಲಿ ಜಗದೀಶ್ ಶೆಟ್ಟರ್ ನಾಯಕರಾಗಿದ್ದ್ರೆ,ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೆನಕೊಪ್ಪ, ಎಸ್ ಐ ಚಿಕ್ಕನಗೌಡರ, ಕಳಕಪ್ಪ ಬಂಡಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ನಂಬಿಕೆ ಮತ್ತು ವಿಜಯೇಂದ್ರ, ಯಡಿಯೂರಪ್ಪ ಶ್ರೀ ರಕ್ಷೆ ಶೆಟ್ಟರ್ ಮೇಲಿದೆ.ಇನ್ನೂ ಹಾಲಿ ಬಣದಲ್ಲಿ ನಾಯಕ ಯಾರು ಇಲ್ಲದಿದ್ದರೂ ಶಾಸಕ ಅರವಿಂದ್ ಬೆಲ್ಲದ, ಸಿಸಿ ಪಾಟೀಲ್, ಎಂಆರ್ ಪಾಟೀಲ್ , ಮಹೇಶ್ ಟೆಂಗಿನಕಾಯಿ ಬಹಿರಂಗವಾಗಿ ಅಕಾಡಕ್ಕಿಳಿದ್ದ್ರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಾಲಿಕೆ ಸದಸ್ಯರು ಶೆಟ್ಟರ್ ವಿರೋಧಿ ಬಣದಲ್ಲಿದ್ದಾರೆ.. ಸಂಘಪರಿವಾರದ ನೆರಳು ಸಹ ಈ ಇವರ ಮೇಲಿದೆ. ಈ ಬಣಗಳ ಮೂಲ ಧಾರವಾಡ ಲೋಕಸಭಾ ಕ್ಷೇತ್ರದ ಸ್ಪರ್ಧೆ, ಮತ್ತೊಂದು ಯಾರ ವರ್ಚಸ್ಸು ಎಷ್ಟಿದೆ ಎನ್ನುವುದನ್ನು ತೋರಿಸಿವುದು.. ಒಳ ಒಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದರೂ ಮಾಧ್ಯಮಗಳೆದರು ಮಾತ್ರ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ‌ ಅಂತ ತೋರಿಸಿಕೊಳ್ಳಲಾಗುತ್ತಿದೆ..

ಒಟ್ಟಿನಲ್ಲಿ ಶೆಟ್ಟರ್ ಆಗಮನದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಮತ್ತಷ್ಟು ಬಲ ಬರುತ್ತೆ ಅಂತ ಪ್ಲಾನ್ ಮಾಡಿದ್ದ ಹೈಕಮಾಂಡ್ ಗೆ ಆರಂಭಿಕ ಆಘಾತವಾಗಿದೆ. ಬಣ ರಾಜಕೀಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಹೊಸ ತಲೆ ಬಿಸಗೆ ಕಾರಣವಾಗಿದೆ. ಯಾರ ಮಧ್ಯಸ್ಥಿಕೆಯಲ್ಲಿ ಈ ಎರಡು ಬಣಗಳು ಒಂದಾಗುತ್ತವೆ ಅಂತ ಕಾದುನೋಡಬೇಕಿದೆ.

– ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

‘ಲಿಂಗಾಯತ ಸಮೂದಾಯದ ನಾಯಕರಿಗೆ ಅನ್ಯಾಯ ಅಗಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ’

‘ರಾಮ ಪ್ರಾಣಪ್ರತಿಷ್ಠಾಪನೆ ಪೂಜೆ ಮೋದಿ ಮಾಡಿದ್ದು ತಪ್ಪು. ಬ್ರಾಹ್ಮಣರೇ ಪೂಜೆ ಮಾಡಬೇಕಲ್ವಾ?’

ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್‌ರಿಂದ ಸಿದ್ಧಾರೂಢರಿಗೆ ವಿಶೇಷ ಪೂಜೆ

About The Author