Thursday, December 4, 2025

Latest Posts

ತಿರುಪತಿಯಲ್ಲಿ ಭಿಕ್ಷುನಂತೆ ತಿರುಗಿದ ಈ ಖ್ಯಾತ ನಟ ಯಾರೆಂದು ಗೊತ್ತೇ..?

- Advertisement -

Movie News: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟರು ಭಿಕ್ಷುಕನ ಪಾತ್ರ ಹಾಕಿ, ಗುರುತೇ ಸಿಗದಂತೆ ಇದ್ದದ್ದನ್ನು ನಾವು ನೋಡಿದ್ದೇವೆ. ಇದೀಗ ಇನ್ನೋರ್ವ ನಟ, ತಿರುಪತಿಯಲ್ಲಿ ಭಿಕ್ಷುಕನ ಪಾತ್ರ ಧರಿಸಿ, ಓಡಾಡಿದ್ದಾರೆ. ಆದರೆ ಇದು ಸುಮ್ಮ ಸುಮ್ಮನೆ ಓಡಾಡಿದ್ದಲ್ಲ ಬದಲಾಗಿ, ಸಿನಿಮಾ ಶೂಟಿಂಗ್‌ಗಾಗಿ ಆ ನಟ ಭಿಕ್ಷುಕನ ಪಾತ್ರ ಧರಿಸಿದ್‌ದಾರೆ.

ಹಾಗಾದ್ರೆ ಯಾರು ಆ ನಟ ಅಂತೀರಾ. ಅವರಿಗೆ ತಮಿಳಿನ ಪ್ರಸಿದ್ಧ ನಟ ಧನುಷ್. ಇದು ಧನುಷ್ ಅವರ 51ನೇ ಸಿನಿಮಾ ಆಗಿದ್ದು, ಇದಕ್ಕೆ ಅವರ ಫ್ಯಾನ್ಸ್ ಡಿ51 ಎಂದು ಹೆಸರಿಟ್ಟಿದ್ದಾರೆ. ತಿರುಪತಿಯ ಬೀದಿಯಲ್ಲಿ ಧನುಷ್ ನಟನೆಯ ಈ ಸಿನಿಮಾದ ಶೂಟಿಂಗ್ ನಡೆದ ಪರಿಣಾಮ, ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜನ ನಟ ಮತ್ತು ಸಿನಿಮಾ ತಂಡವನ್ನು ಚೆನ್ನಾಗಿಯೇ ಬೈದುಕೊಂಡಿದ್ದಾರೆ.

ಇನ್ನು ಪೊಲೀಸರು ಶೂಟಿಂಗ್ ನಿಲ್ಲಿಸುವಂತೆ ಒತ್ತಾಯಿಸಿದ್ದರೂ ಕೂಡ, ಚಿತ್ರತಂಡ ತನ್ನ ಕೆಲಸ ತಾನು ಮುಂದುವರಿಸಿಕೊಂಡು ಹೋಗಿದೆ. ಉಪಾಯವಿಲ್ಲದೇ, ಪೊಲೀಸರು ಕೂಡ ಟ್ರಾಫಿಕ್ ನಿಯಂತ್ರಿಸಿ, ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶೂಟಿಂಗ್ ಅಂತು ಯಶಸ್ವಿಯಾಗಿ ಮುಗಿದಿದೆ. ಇದೇ ಖುಷಿಗೆ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ವಾಪಸ್ ತೆರಳಿದೆ.

‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’

2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

- Advertisement -

Latest Posts

Don't Miss