ಹೊಸದಾಗಿ ಸಂಸಾರ ಆರಂಭಿಸಲು ಇಬ್ಬರು ಮಕ್ಕಳನ್ನು ಕೊಂದ ದಂಪತಿ

China News:  ಹೊಸದಾಗಿ ಜೀವನ ಆರಂಭಿಸಬೇಕು ಎಂದು ದಂಪತಿ ಇಬ್ಬರು ಮಕ್ಕಳನ್ನು ಅಪಾರ್ಟ್‌ಮೆಂಟ್‌ನ 15ನೇ ಮಹಡಿಯ ಕಿಟಕಿಯಿಂದ ಹೊರಗೆ ಬಿಸಾಕುವ ಮೂಲಕ ಕೊಂದಿದ್ದಾರೆ.

ಜಂಗ್ಬೋ, ಮತ್ತು ಇವನ ಗರ್ಲ್‌ಫ್ರೆಂಡ್ ಎ ಚೆಂಗ್‌ಚೆನ್ ಈ ನೀಚ ಕೆಲಸ ಮಾಡಿದವರಾಗಿದ್ದಾರೆ. ಜಂಗ್‌ಬೋಗೆ ಈಗಾಗಲೇ ಮದುವೆಯಾಗಿದ್ದು, ಇವನಿಗೆ ಒಂದು ವರ್ಷದ ಹೆಣ್ಣು ಮತ್ತು 2 ವರ್ಷದ ಗಂಡು ಮಗುವಿತ್ತು. ಆದರೆ ಆತ ತಾನು ಈ ಮೊದಲೇ ವಿವಾಹಿತನೆಂದು ಹೇಳದೇ, ಅನೈತಿಕ ಸಂಬಂಧ ಶುರು ಮಾಡಿದ್ದಾನೆ.

ಆಕೆಗೆ ವಿಷಯ ಗೊತ್ತಾದ ಬಳಿಕ ಆಕೆ ನೀನು ನಿನ್ನ ಪತ್ನಿಯನ್ನು ಬಿಟ್ಟುಬಿಡು ಎಂದಿದ್ದಾಳೆ. ಗರ್ಲ್‌ಫ್ರೆಂಡ್ ಮಾತು ಕೇಳಿ, 2020ರಲ್ಲಿ ಪತ್ನಿಗೆ ಡಿವೋರ್ಸ್ ನೀಡಿದ್ದಾನೆ. ಮಕ್ಕಳು ಇವನೊಂದಿಗೆ ಇದ್ದರು. ಆದರೆ ಅವರಿಂದ ಹೊಸ ಸಂಸಾರ ಆರಂಭಿಸುವುದಕ್ಕೆ ತನಗೆ ಅಡೆತಡೆಯುಂಟಾಗುತ್ತದೆ. ಅವರನ್ನು ಕೊಂದುಬಿಡು ಎಂದಿದ್ದಾಳೆ. ಗರ್ಲ್‌ಫ್ರೆಂಡ್ ಕೊಟ್ಟ ದರಿದ್ರ ಐಡಿಯಾಗೂ ಒಪ್ಪಿಗೆ ಕೊಟ್ಟಿದ್ದ ನೀಚ, ಮಕ್ಕಳನ್ನು ಕಿಟಕಿಯಿಂದ ಬಿಸಾಡಿ ಸಾಯಿಸಿದ್ದಾನೆ. ಇದೀಗ ಅವರ ಈ ಆರೋಪ ಸಾಬೀತಾಗಿದ್ದು, ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು. ಜಂಗ್ಬೋ, ಮತ್ತು ಇವನ ಗರ್ಲ್‌ಫ್ರೆಂಡ್ ಎ ಚೆಂಗ್‌ಚೆನ್ ಅದಾಗಲೇ ಮರಮ ದಂಡನೆಗೆ ಗುರಿಯಾಗಿದ್ದಾರೆ.

ಐಸಿಸ್‌ ಉಗ್ರ ಚಟುವಟಿಕೆಗಾಗಿ ಯುವಕರನ್ನು ಸೆಳೆಯುತ್ತಿದ್ದವನಿಗೆ 10 ವರ್ಷ ಜೈಲು ಶಿಕ್ಷೆ

ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ

ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಎಂಗೇಜ್ ಆದ ನಟಿ ಕೃತಿ ಕರಬಂಧ

About The Author