ಉತ್ತರ ಭಾರತದ ಅಭಿವೃದ್ಧಿಗೆ ನನ್ನದೂ ವಿರೋಧವಿದೆ- ಸಚಿವ ಸಂತೋಷ್ ಲಾಡ್

Hubli Political News: ಹುಬ್ಬಳ್ಳಿ: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ ಮಾಡುವ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಸಚಿವ ಸಂತೋಷ ಲಾಡ್ ಸಹಮತ ವ್ಯಕ್ತಪಡಿಸಿ ದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಅವರ ಹೇಳಿಕೆಗೆ ಸಹಮತವಿದೆ. ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಹಣದ ಪ್ರಮಾಣದಲ್ಲಿ ದಕ್ಷಿಣ ಭಾರತರದ ಪಾಲೆಷ್ಟು, ಉತ್ತರ ಭಾರತದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ದಕ್ಷಿಣ ಭಾರತದ ತೆರಿಗೆ ಹಣದಿಂದ ಉತ್ತರ ಭಾರತವನ್ನು ಅಭಿವೃದ್ಧಿ ಪಡಿಸುವ ವಿಚಾರಕ್ಕೆ ನನ್ನದೂ ವಿರೋಧವಿದೆ. ಇದೇ ವಿಚಾರವನ್ನು ಡಿಕೆ ಸುರೇಶ್ ಹೇಳಿದ್ದಾರೆ ಎಂದರು.

ದಿನಂಪ್ರತಿ ಸಂವಿಧಾನ ಬದಲಿಸುವ, ತಿದ್ದುಪಡಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರದ್ದೂ ಭಾರತ ಒಡೆಯುವ ಯೋಚನೆಯೇ. ಈ ಹಿಂದೆಯೂ ಹಲವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಆಗ್ರಹಿಸಿದ್ದರು. ಅದು ಅವರ ಅಭಿಪ್ರಾಯ. 2014ರ ಮೊದಲು ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ನೀಡುತ್ತಿದ್ದ ಅನುದಾನ 2014ರ ನಂತರ ದೊರೆಯುತ್ತಿಲ್ಲ. ದೇಶದ 80ಕೋಟಿ ಜನರಿಗೆ ಅಕ್ಕಿ ಕೊಡುವುದು ನಮ್ಮ ಯೋಜನೆ. ಇಂದಿರಾ ಗಾಂಧಿ ಕಾಲದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾದಾಗಿನಿಂದ ಅಕ್ಕಿ ಕೊಡುತ್ತಿದ್ದೇವೆ. ಆದರೆ, ಈಗ ಪ್ರಧಾನಿ ಮೋದಿ ತಾವು ಅಕ್ಕಿ ಕೊಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ವಿಧವೆಯರಿಗೆ, ಅಂಗ ವಿಕಲರಿಗೆ, ಹಿರಿಯ ನಾಗರಿಕರಿಗೆ ಮಾಸಾಶನ ನಿಗದಿಯಾಗಿದ್ದು ನಮ್ಮ ಅವಧಿಯಲ್ಲಿ. ಹೀಗಾಗಿ ಬಿಜೆಪಿಗರು ಏನು ಮಾಡಿದ್ದಾರೆ ಎಂಬುದು ಚರ್ಚೆಯಾಗಲಿ. ಮೇಕ್ ಇನ್ ಇಂಡಿಯಾ ಘೋಷಣೆಯಡಿ ಸೂಜಿಯನ್ನೂ ತಯಾರಿಸದ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಜನರಿಗೆ ಕಾಂಗ್ರೆಸ್, ಬಿಜೆಪಿ ಮುಖ್ಯವಲ್ಲ‌. ಅವರ ಕಷ್ಟಗಳಿಗೆ ಮಿಡುಯುವ, ಕಣ್ಣೀರು ಒರೆಸುವವರೇ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಇದರಿಂದ ಜನ ಸಂತೋಷವಾಗಿದ್ದಾರೆ. ತಾಂತ್ರಿಕ ಕಾರಣಗಳಿಂದ ಶೇ.4ರಷ್ಟು ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಅನುದಾನ ತಲುಪಿಲ್ಲ. ಅವರನ್ನೂ ಯೋಜನೆಗೆ ಒಳಪಡಿಸುವ ಉದ್ದೇಶದಿಂದ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕಾಂಗ್ರೆಸ್ ಸೇರಿವಾ ಅವರ ಜೊತೆ ಯಾರೂ ಬಂದಿಲ್ಲ. ಯಾರೂ ಬಾರದೇ ಇದ್ದಾಗ ಹೋಗುವ ಪ್ರಶ್ನೆಯೇ ಇಲ್ಲ. ಶೆಟ್ಟರ ಜೊತೆ ಕಾಂಗ್ರೆಸ್ ಸೇರಿದವರನ್ನು ನಾನು ನೋಡಿಲ್ಲ. ಹೀಗಾಗಿ ಶೆಟ್ಟರ ಹಿಂದೆ ಯಾರೂ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

11 ದಿನದಲ್ಲಿ 25 ಲಕ್ಷ ಜನರಿಂದ ಬಾಲಕರಾಮನ ದರ್ಶನ: 11 ಕೋಟಿ ಕಾಣಿಕೆ ಸಂಗ್ರಹ

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ನಿಧನ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

About The Author